ರಾಮನಗರ: ಚನ್ನಪಟ್ಟಣ ಉಪಚುನಾವಣೆಯಲ್ಲಿ ನನ್ನ ಗೆಲುವು ನಿರೀಕ್ಷೆ ಮಾಡಿದ್ದೆ ಎಂದು ಚನ್ನಪಟ್ಟಣ ವಿಜೇತ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ. ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಸಿ.ಪಿ.ಯೋಗೇಶ್ವರ್, ನಾನು 30 ಸಾವಿರ ಮತಗಳ ಅಂತರದಿಂದ ಗೆಲ್ಲುವ ನಿರೀಕ್ಷೆಯಲ್ಲಿದ್ದೆ. ಮಾಜಿ ಪ್ರಧಾನಿ ದೇವೇಗೌಡರು ಮೊಮ್ಮಗನನ್ನೇ ಪಣಕ್ಕಿಟ್ಟಿದ್ದರು. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಗನನ್ನೇ ಪಣಕ್ಕಿಟ್ಟಿದ್ದರು. ಮಗನ ಭವಿಷ್ಯ ರೂಪಿಸಬೇಕಿದ್ರೆ ಮಂಡ್ಯದಿಂದ ನಿಲ್ಲಿಸಿ ಗೆಲ್ಲಿಸಬಹುದಿತ್ತು ಆದ್ರೆ ಕುಮಾರಸ್ವಾಮಿ ಸ್ವಾರ್ಥ, ದುರಾಸೆಗೆ ಮಗನನ್ನೇ ಬಲಿಕೊಟ್ಟಿದ್ದಾರೆ ಎಂದರು. ನಿಖಿಲ್ ಸೋಲುವ ಮೂಲಕ ಜೆಡಿಎಸ್ ಅಂತಿಮ ದಿನಗಳನ್ನು ಎಣಿಸುತ್ತಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಜನರು ತಿರಸ್ಕರಿಸಿದ್ದಾರೆ. ಮೊಮ್ಮಗನನ್ನು ಗೆಲ್ಲಿಸುವ ಸ್ವಾರ್ಥವಿತ್ತು, ಅದಕ್ಕೆ ಜನಮನ್ನಣೆ ನೀಡಿಲ್ಲ ಎಂದು ತಿರುಗೇಟು ನೀಡಿದರು. ಉಪಚುನಾವಣೆಯಲ್ಲಿ ವಿಜಯೇಂದ್ರ ಬ್ಯಾಟರಿ ವೀಕ್ ಎಂದು ಹೇಳಿದ್ರು, ವಿಜಯೇಂದ್ರರೇ ನಿಮ್ಮ ಬ್ಯಾಟರಿ ವೀಕ್ ಆದಾಗ ಚಾರ್ಜ್ ಮಾಡಿದ್ದು ನಾನು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರಗೆ ಸಿ.ಪಿ.ಯೋಗೇಶ್ವರ್ ಟಾಂಗ್ ನೀಡಿದರು.
ಚನ್ನಪಟ್ಟಣ ಚದುರಂಗದಲ್ಲಿ ʼಕೈʼ ಕಮಾಲ್ : ಗೆಲುವಿನ ನಿರೀಕ್ಷೆಯಲ್ಲಿದ್ದ ನಿಖಿಲ್ಗೆ ಶಾಕ್