ಮೈಸೂರು: ತನ್ನ ಜತೆಗಿರುವ ಪೋಟೊವನ್ನು ಹೆಂಡತಿಗೆ ಕಳುಹಿಸುವೆ ಎಂದು ಬೆದರಿಕೆ ಹಾಕಿ ವಿವಾಹಿತನಿಗೆ ೧೦ಲಕ್ಷಕ್ಕೆ ಬೇಡಿಕೆಯಿಟ್ಟ ಮಹಿಳೆಯ ವಿರುದ್ಧ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಬಳ್ಳಾರಿ ಸಂಸದ ದೇವೇಂದ್ರಪ್ಪ ಅವರ ಪುತ್ರ ರಂಗನಾಥ್‌ ಯುವತಿ ವಿರುದ್ದ ಇಂತಹದೊಂದು ದೂರು ದಾಖಲಿಸಿದ್ದಾರೆ. ರಂಗನಾಥ್‌ ಅವರ ಸ್ನೇಹಿತ ಕಲ್ಲೇಶ್‌ ಅವರ ಮೂಲಕ ಯುವತಿ ಪರಿಚಿತರಾಗಿದ್ದಾರೆ. ಎರಡು-ಮೂರು ಭೇಟಿಗಳಲ್ಲಿ ಯುವತಿಯನ್ನು ರಂಗನಾಥ್‌ರನ್ನು ಪ್ರೀತಿಸುವ ಬಯಕೆ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಇದಕ್ಕೊಪ್ಪದ ರಂಗನಾಥ್‌ ಯುವತಿ ಪ್ರೀತಿ ನಿರಾಕರಿಸಿದ್ದಾರೆ. ಇದಾಗಿಯೂ ಬೆಂಗಳೂರಿನ ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣದಲ್ಲಿ ಯುವತಿ ರಂಗನಾಥ್‌ ವಿರುದ್ಧ ತಿರುಗಿ ಬಿದ್ದಿದ್ದು, ಅವಾಚ್ಯ ಶಬ್ಧಗಳಿಂದಲೂ ನಿಂದಿಸಿದ್ದಾರೆ. ಇದಾಗಿಯೂ ಮಾನಸಿಕವಾಗಿ ಹಣಕ್ಕಾಗಿ ಪೀಡಿಸಿದ್ದಾರೆ. ಇದರಿಂದಾಗ ಬೇಸತ್ತು ಪ್ರಾರಂಭದಲ್ಲಿ ೩೨೫೦೦ ರೂ.ಗಳನ್ನು ಸಹ ನೀಡಿರುತ್ತೇನೆ. ಇದಾದ ಬಳಿಕವೂ ಯುವತಿ ಹಣ ನೀಡುವಂತೆ ದುಂಬಾಲು ಬಿದ್ದಿದ್ದು, ಹಣ ನೀಡಲು ನಿರಾಕರಿಸಿದ್ದೇನೆ.

ಹೋಟೆಲ್ ಶೈಲಿಯ ಪಾಲಕ್ ಪನೀರ್ ಹೇಗೆ ಮಾಡೋದು ಅಂತೀರಾ : ಇಲ್ಲಿದೆ!

ಈ ಹಿನ್ನೆಲೆಯಲ್ಲಿ ಶ್ರೀನಿವಾಸ್‌ ಎಂಬುವವರನ್ನು ಮೈಸೂರಿಗೆ ಕಳುಹಿಸಿದ್ದು, ಆತ ೧೦ಲಕ್ಷ ರೂ. ನೀಡಿ ಇಲ್ಲದಿದ್ದರೆ ನಿನ್ನ ಹಾಗೂ ಯುವತಿ ಜತೆ ಇರುವ ಚಿತ್ರಗಳನ್ನು ನಿಮ್ಮ ಪತ್ನಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಯುವತಿ ಹಾಗೂ ಶ್ರೀನಿವಾಸ್‌ ವಿರುದ್ಧ ಜಾತಿ ನಿಂದನೆ ಹಾಗೂ ಬೇದರಿಕೆ ದೂರು ದಾಖಲಿಸಿರುವುದಾಗಿ ರಂಗನಾಥ್‌ ದೂರಿನಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Share.