ನವದೆಹಲಿ:- ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಇಂದು ಹೊರಬೀಳಲಿದೆ. ಈಗಾಗಲೇ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಕೆಲವೇ ಹೊತ್ತಲ್ಲಿ ಅಂತಿಮ ಚಿತ್ರಣ ಗೊತ್ತಾಗಲಿದೆ.
ಹನಿಟ್ರ್ಯಾಪ್: ಪ್ರೀತಿ, ಪ್ರೇಮ, ಮದುವೆ ಹೆಸರಿನಲ್ಲಿ ಹಲವರಿಗೆ ವಂಚಿಸಿದ ಮಹಿಳೆ ಅಂದರ್!
ಪ್ರಾಥಮಿಕ ಮಾಹಿತಿ ಪ್ರಕಾರ 42 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಎಎಪಿಗೆ ಢವಢವ ಶುರುವಾಗಿದೆ. ಇನ್ನೂ ಮತ ಎಣಿಕೆ ಕೇಂದ್ರ ಹಾಗೂ ಅದರ ಸುತ್ತಮುತ್ತ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ದೆಹಲಿ ಗದ್ದುಗೆ ಏರೋದ್ಯಾರು? ಎಂಬ ಪ್ರಶ್ನೆಗಳಿಗೆ ಇಂದು ಉತ್ತರ ಸಿಗಲಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಶುರುವಾಗಿದ್ದು, ಬಿಜೆಪಿ ಆರಂಭಿಕ ಮುನ್ನಡೆ ಕಾಯ್ದುಕೊಂಡಿದೆ. ಬೆಳಗ್ಗೆ 8:30ರ ಸುಮಾರಿಗೆ ಬಿಜೆಪಿ 31 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಹ್ಯಾಟ್ರಿಕ್ ಕನಸು ಹೊತ್ತಿರುವ ಎಎಪಿ 18 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ರೆ ಕಾಂಗ್ರೆಸ್ ಕೇವಲ ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.
ಫಲಿತಾಂಶದ ಆರಂಭದಲ್ಲೇ ಆಪ್ಗೆ ಆಘಾತವಾಗಿದೆ. ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಹಾಲಿ ಸಿಎಂ ಅತಿಶಿ, ಮನೀಶ್ ಸಿಸೋಡಿಯಾ ಸೇರಿ ಘಟಾನುಘಟಿ ನಾಯಕರು ಹಿನ್ನಡೆ ಅನುಭವಿಸಿದ್ದಾರೆ.
ಮಾಳವೀಯ ನಗರ, ಛತ್ತರ್ಪುರ, ದಿಯೋಲಿ, ಅಂಬೇಡ್ಕರ್ ನಗರ ಮತ್ತು ಮೆಹ್ರೌಲಿ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶಗಳ ಎಣಿಕೆ ಆರಂಭವಾಗಿದೆ. 699 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಯಂತ್ರ ಸೇರಿತ್ತು. ಬಹುತೇಕ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಬಿಜೆಪಿಗೆ ಅಧಿಕಾರ ದಕ್ಕಲಿದೆ ಎಂದು ಹೇಳಿವೆ. ಈ ಸಮೀಕ್ಷೆಗಳನ್ನು ಒಪ್ಪದ ಆಮ್ ಆದ್ಮಿ ಪಕ್ಷ ಬಿಜೆಪಿ ವಿರುದ್ಧವೇ ಆಪರೇಷನ್ ಕಮಲದ ಆರೋಪ ಮಾಡಿದೆ.
ಓಖ್ಲಾ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ (ಮುಸ್ಲಿಂ ಪ್ರಾಬಲ್ಯದ ಕ್ಷೇತ್ರ)
ಎರಡನೇ ಸುತ್ತಿನ ಎಣಿಕೆಯ ನಂತರದ ಅಂಕಿ ಅಂಶಗಳು:
ಮನೀಶ್ ಚೌಧರಿ (ಬಿಜೆಪಿ): 8,111
ಅಮಾನತುಲ್ಲಾ ಖಾನ್ (ಎಎಪಿ): 6,377
ಶಿಫಾ ಉರ್ ರೆಹಮಾನ್ (ಎಐಎಂಐಎಂ): 1,679
ಅರಿಬಾ ಖಾನ್ (ಐಎನ್ಸಿ): 1,240
ಬಿಜೆಪಿ 42, ಎಎಪಿ 27 ಕ್ಷೇತ್ರಗಳಲ್ಲಿ ಮುನ್ನಡೆ
ದೆಹಲಿಯ ಒಟ್ಟು 70 ಸ್ಥಾನಗಳ ಪೈಕಿ 42 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಎಎಪಿಗಿಂತ ಮುಂದಿದೆ ಎಂದು ಆರಂಭಿಕ ಅಧಿಕೃತ ಟ್ರೆಂಡ್ ತಿಳಿಸಿವೆ.