ಬೆಂಗಳೂರು:- ದೆಹಲಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ಹಿನ್ನೆಲೆ ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿ ಎದುರು ಸಂಭ್ರಮಾಚರಣೆ ಜೋರಾಗಿದೆ.
ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಹಲವು ನಾಯಕರು ಭಾಗಿಯಾಗಿ, ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಇನ್ನೂ 45ಕ್ಷೇತ್ರಗಳಲ್ಲಿ ಬಹುಮತಗಳಿಸುತ್ತಾ ಬಿಜೆಪಿಯು ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ಮೇಲುಗೈ ಸಾಧಿಸುತ್ತಿದೆ. ಅಂತಿಮ ಫಲಿತಾಂಶ ಹೊರ ಬೀಳಬೇಕಿದೆ. ಬಿಜೆಪಿಗೆ ರಾಜಧಾನಿಯ ಅಧಿಕಾರದ ವಾಸನೆ ಬಲವಾಗಿಯೇ ಬೀರಿದೆ. ಈಗಲೇ ಬಿಜೆಪಿಯ ಕೆಲ ನಾಯಕರು ಗೆಲುವಿನ ಭಾಷಣ ನೀಡುತ್ತಾ ದೇವಾಲಯಗಳಲ್ಲಿ ಪೂಜೆ ಸಲ್ಲಿಸುತ್ತಿದ್ದರೆ, ಇತ್ತ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.