ಬೆಂಗಳೂರು:- ಮುಂದಿನ ದಿನದಲ್ಲಿ ಡಬಲ್ ಡೆಕ್ಕರ್ ಮೆಟ್ರೋ ಮಾಡುವ ಪ್ಲ್ಯಾನ್ ಮಾಡಲಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಎಲ್ಲೂ ಕೂಡ ಅಕ್ವಿಜೇಶನ್ ಮಾಡುವುದಕ್ಕೆ ಆಗಲ್ಲ. ಮುಂದಿನ ದಿನಗಳಲ್ಲಿ ಎಲ್ಲೇ ಮೆಟ್ರೋ ಮಾಡಿದರೂ ಡಬಲ್ ಡೆಕ್ಕರ್ ಮೆಟ್ರೋ ಮಾಡುವ ತೀರ್ಮಾನ ಆಗಿದೆ. ಅದರ ವೆಚ್ಚವನ್ನು ಕಾರ್ಪೊರೇಷನ್ ಮತ್ತು ಬಿಎಂಆರ್ಸಿಎಲ್ ಇಬ್ಬರು ಕೂಡ ಭರಿಸುತ್ತಾರೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಅಭಿವೃದ್ದಿಗೆ 70 ಸಾವಿರ ಸಲಹೆಗಳು ಬಂದಿದ್ದವು. ಟ್ರಾಫಿಕ್, ಕಸ, ಕಂಸ್ಟ್ರಕ್ಷನ್ ವಿಚಾರ ಮೆಟ್ರೋ, ಎಲಿವೇಟೆಡ್ ಕಾರಿಡಾರ್ ಕುರಿತು ಚರ್ಚಿಸಿ ಪ್ರಸ್ಥಾವನೆ ಸಲ್ಲಿಸಿದ್ದಾರೆ. ಸರ್ಕಾರ ಏನೇ ತೀರ್ಮಾನಿಸುವ ಹಕ್ಕಿದ್ದರೂ ಎಲ್ಲ ಶಾಸಕರ ಜೊತೆ ಚರ್ಚೆ ಮಾಡುವ ಮಾತು ಕೊಟ್ಟಿದ್ದೆ. 18.5 ಕಿಮಿ ಎಸ್ಟಿ ಮಾಲ್ ಟು ಸಿಲ್ಕ್ ಬೋರ್ಡ್ ಜಂಕ್ಷನ್ ಟನಲ್ ನಿರ್ಮಾಣ ಮಾಡಲಾಗುವುದು ಎಂದಿದ್ದಾರೆ