ಬೀದರ್ : ಬೀದರ್ ಜಿಲ್ಲೆಯ ಭಾಲ್ಕಿ ಸರ್ಕಾರಿ ಆಸ್ಪತ್ರೆ ಸಮೀಪದಲ್ಲಿ ಇದಕ್ಕಿದ್ದಂತೆ ಕಾಗೆಗಳು ಸಾವನ್ನಪ್ಪಿದ್ದು, ಹಕ್ಕಿ ಜ್ವರದ ಸಂಶಯ ವ್ಯಕ್ತವಾಗಿದೆ.
ಭಾಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಕಾಗೆಗಳು ಏಕಾಏಕಿ ಸಾವನ್ನಪ್ಪಿ, ಕೆಳಗೆ ಬಿದ್ದಿವೆ. ಕಳೆದ ಒಂದು ವಾರದಿಂದ ಕಾಗೆಗಳು ಸತ್ತು ಬೀಳುತ್ತಿವೆ. ನಿನ್ನೆ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಎರಡು ಕಾಗೆ ಸತ್ತು ಬಿದ್ದಿವೆ. ಹೀಗಾಗಿ ಹಕ್ಕಿ ಜ್ವರದ ಆತಂಕ ಸೃಷ್ಟಿಯಾಗಿದ್ದು, ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ
ನಿಮ್ಮ ಮನೆ ಹೆಣ್ಣು ಮಕ್ಕಳಿಗೆ ಹೀಗಾಗಿದ್ರೆ ನೀವೇನ್ ಮಾಡ್ತಿದ್ರಿ ; ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ
ಎರಡು ಮೃತ ಕಾಗೆಗಳ ಮೃತದೇಹವನ್ನು ಪ್ರಾದೇಶಿಕ ಪ್ರಯೋಗಾಲಯಕ್ಕೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಇಂದು ಸಾಯಂಕಾಲವರೆಗೆ ವರದಿ ಬಂದ ಮೇಲೆ ಮುಂದಿನ ಕ್ರಮಕ್ಕೆ ಸೂಚಿಸಲಾಗುವುದು ಪಶು ಇಲಾಖೆ ಉಪ ನಿರ್ದೇಶಕ ನರಸಪ್ಪಾ ಮಾಹಿತಿ ನೀಡಿದ್ದಾರೆ.