ಹಾಸನ : ನವಜಾತ ಶಿಶುವನ್ನು ಬಿಸಾಡಿ ಹೋಗಿರುವ ಘಟನೆ ನಡೆದಿದೆ. ಹಾಸನದ ಕುವೆಂಪು ನಗರದಲ್ಲಿ ಇಂಥ ಅಮಾನವೀಯ ಘಟನೆ ನಡೆದಿದೆ.
ರಾಜಜಾಲುವೆಯಲ್ಲಿ ಪತ್ತೆಯಾಗಿರುವ ನವಜಾತ ಹೆಣ್ಣು ಶಿಶು ಮೃತದೇಹ ಪತ್ತೆಯಾಗಿದ್ದು, ಮಗು ಜನಸಿದ ಕೂಡಲೇ ಮಗು ಬಿಸಾಡಲಾಗಿದೆ. ರಾಜುಕಾಲುವೆಯಲ್ಲಿ ಹರಿಯುವ ಕೊಳಚೆ ನೀರಿನಲ್ಲಿ ಬಿದ್ದಿರುವ ನವಜಾತ ಶಿಶು ಮೃತದೇಹದಲ್ಲಿ, ಕರುಳ ಬಳ್ಳಿ ಸಹ ಇನ್ನೂ ಹಾಗೇ ಇದೆ.
ಹೆಣ್ಣು ಮಗು ಎಂಬ ಕಾರಣಕ್ಕೆ ಬಿಸಾಡಿರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆ.ಆರ್.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.