ಮೈಸೂರು:- ನೀರಿನಲ್ಲಿ ಮುಳುಗಿ ತಾತ ಹಾಗೂ ಇಬ್ಬರು ಮೊಮ್ಮಕ್ಕಳು ಸೇರಿ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕಿನಲ್ಲಿ ಜರುಗಿದೆ.
ಚೌಡಯ್ಯ 70, ಭರತ್ 13, ಧನುಷ್ 10 ವರ್ಷ ಮೃತ ದುರ್ದೈವಿಗಳು. ಮೃತರು ಟಿ ನರಸೀಪುರ ಪಟ್ಟಣದ ತಿರುಮಕೂಡಲಿನ ನಿವಾಸಿಗಳು ಎನ್ನಲಾಗಿದೆ. ಕಾವೇರಿ ನದಿ ಬಳಿಗೆ ತೆರಳಿದ್ದ ವೇಳೆ ಈ ಘಟನೆ ಜರುಗಿದೆ. ಇಬ್ಬರು ಮೊಮ್ಮಕ್ಕಳು ನೀರಿನಲ್ಲಿ ಮುಳುಗಿದ್ದ ಹಿನ್ನೆಲೆ, ಮಕ್ಕಳ ರಕ್ಷಣೆಗೆ ತಾತ ಚೌಡಯ್ಯ ತೆರಳಿದ್ದಾರೆ. ಆದರೆ ದುರಾದೃಷ್ಟವಶಾತ್ ಇಬ್ಬರು ಮೊಮ್ಮಕ್ಕಳನ್ನ ರಕ್ಷಿಸಲಾಗದೆ ತಾವು ಸಾವನ್ನಪ್ಪಿದ್ದಾರೆ.ಟಿ ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಮೃತ ದೇಹಗಳನ್ನು ರವಾನೆ ಮಾಡಲಾಗಿದೆ.
ಟಿ ನರಸೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.