ಬೆಂಗಳೂರು : ಡಿಕೆಶಿ ಶಿವಕುಮಾರ್ ಮಂಡ್ಯದವರ ಬಗ್ಗೆ ನೀಡಿದ ಹೇಳಿಕೆಯೊಂದು ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.. ಮಂಡ್ಯದವರು ಛತ್ರಿಗಳು ಎಂಬಂತೆ ಮಾತನಾಡಿದ್ದ ಡಿಕೆಶಿ ಅವರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗ್ತಿದ್ದು, ಮಂಡ್ಯದ ಜನರ ಕೋಪಕ್ಕೆ ಗುರಿಯಾಗಿದೆ.
ಇತ್ತೀಚಿಗೆ ಮಾ.17ರಂದು ಕಾಂಗ್ರೆಸ್ ಯುವ ನಾಯಕರ ಪದಗ್ರಹಣ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಮಾತ್ನಾಡ್ತಾ ಇರೋವಾಗಲೇ ಕೆಲವರು ಜನ ಫಲಕ ಹಾಗೂ ಭಾವುಟಗಳನ್ನು ಪ್ರದರ್ಶಿಸಿದ್ದರು, ಇದ್ರಿಂದಾಗಿ ಸಿಟ್ಟಾದ ಡಿಕೆ ಸಾಹೇಬ್ರು ವೇದಿಕೆ ಮೇಲೆ ರಾಂಗ್ ಆಗಿದ್ದಾರೆ.. ಈ ಮಂಡ್ಯದವರ ಛತ್ರಿ ಆಟಗಳನ್ನು ಮೊದ್ಲು ಬಿಡಿ ಎಂದು ರೇಗಿದ್ದಾರೆ. ಸದ್ಯ ಈ ವಿಡಿಯೋ ಮಂಡ್ಯದ ಜನರ ಮನಸ್ಸಲ್ಲಿ ಕಿಚ್ಚೆಬ್ಬಿಸಿದೆ. ಡಿಕೆ ಗೌಡ್ರು ಮಂಡ್ಯಕ್ಕೆ , ಮಂಡ್ಯದ ಜನರಿಗೆ ಅವಮಾನ ಮಾಡಿದ್ದಾರೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವಾರ್ ನಡೀತಿದೆ.
ರಾಮನಗರ ಜಿಲ್ಲೆಯ ಹೆಸರನ್ನು ನಾವು ಬದಲಾವಣೆ ಮಾಡುತ್ತೇವೆ: ಡಿಕೆ ಶಿವಕುಮಾರ್
ಇನ್ನೂ ಇದಲ್ಲದೇ ಇನ್ನು ಡಿ.ಕೆ ಶಿವಕುಮಾರ್ ಅವರು ಉತ್ತರ ಕರ್ನಾಟಕದ ಶಾಸಕರಿಗೂ ಅವಮಾನ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ನವಲಗುಂದ ಶಾಸಕರಿಗೆ ಗದರಿರುವ ವಿಡಿಯೋ ಸಹ ವೈರಲ್ ಆಗಿದೆ. ಸದ್ಯ ವಿಪಕ್ಷಗಳನ್ನು ಇದನ್ನೇ ಅಸ್ತ್ರವಾಗಿಸಿರಕೊಂಡು ಸೋಷಿಯಲ್ ಮೀಡಿಯಾದಲ್ಲಿ ಡಿಕೆಶಿ ವಿರುದ್ದಧ ಸಮರ ಸಾರಿವೆ.. ಕಣ್ಣು ಮುಚ್ಚಿ ಆರು ಶಾಸಕರನ್ನು ಕಳುಹಿಸಿಕೊಟ್ಟ ಮಂಡ್ಯ ಜನಕ್ಕೆ ಎಂಥ ಗೌರವ ಕೊಟ್ಟಿದ್ದಾರೆ ಅಂತಾ ಟೀಕೆ ಮಾಡ್ತಿವೆ.