Facebook Twitter Instagram YouTube
    ಕನ್ನಡ     English     తెలుగు
    Sunday, January 29
    Facebook Twitter Instagram YouTube
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ     English     తెలుగు
    Facebook Twitter Instagram YouTube
    Home » ಮರ ಕಡಿಸಿದ ಅರಣ್ಯ ರಕ್ಷಕನಿಗೆ ಅಮಾನತ್ತಿನ ಬದಲು ವರ್ಗಾವಣೆ ಉಡುಗೊರೆ ನೀಡಿದ ಡಿಸಿಎಫ್

    ಮರ ಕಡಿಸಿದ ಅರಣ್ಯ ರಕ್ಷಕನಿಗೆ ಅಮಾನತ್ತಿನ ಬದಲು ವರ್ಗಾವಣೆ ಉಡುಗೊರೆ ನೀಡಿದ ಡಿಸಿಎಫ್

    AIN AdminBy AIN AdminDecember 7, 2022
    Share
    Facebook Twitter LinkedIn Pinterest Email

    ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ. ಅರಣ್ಯ ರಕ್ಷಿಸಬೇಕಾದ ರಕ್ಷಕರೇ ಭಕ್ಷಕರಾದರೆ ಕಾಡು ಉಳಿಯಲು ಹೇಗೆ ಸಾಧ್ಯ. ಮರಗಳ್ಳನ ಜೊತೆ ಮಾತನಾಡಿರುವ ಆಡಿಯೋದ ಸೂಕ್ತ ದಾಖಲೆಯಿದ್ರೂ ಅರಣ್ಯ ರಕ್ಷಕ ಅಮಾನತ್ತುಗೊಳ್ಳದೆ ಶಿಕ್ಷೆಯಿಂದ ಪಾರಾದ ಅಪರೂಪದ ಘಟನೆ ಆಯನೂರು ವಲಯದಲ್ಲಿ ನಡೆದಿದೆ. ಹೌದು ಸದ್ದಾಂ ಹುಸೇನ್ ಎನ್ನುವ ಅರಣ್ಯ ರಕ್ಷಕನ ವಿರುದ್ಧ ಗಂಭೀರ ಆರೋಪ ಸಾಕ್ಷಿ ಸಮೇತ ಲಭ್ಯವಾಗಿದೆ. ಆಯನೂರು ವಲಯದ ಗುಂಡೂರು ಗಸ್ತಿನಲ್ಲಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸದ್ದಾಂ ಹುಸೇನ್ ಮರಗಳ್ಳನ ಜೊತೆ ಸೇರಿ ಮರ ಕಡಿಸಿದ ಗಂಭೀರ ಆರೋಪ ಹೊತ್ತು ಇಲಾಖೆಯ ತನಿಖೆಯನ್ನು ಎದುರಿಸುತ್ತಿದ್ದಾರೆ.

    ಕುಂಸಿಯ ವ್ಯಕ್ತಿಯೊರ್ವರು ಮರ ಕಡಿಸಿದ ಬಗ್ಗೆ ಸಾಕ್ಷಿ ಸಮೇತ ವಿಜಿಲೆನ್ಸ್ ಗೆ ದೂರು ನೀಡಿದ್ರು. ನಂತರ ಈ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಡಿಸಿಎಫ್ ಮಟ್ಟದ ಅಧಿಕಾರಿಗೆ ವಹಿಸಲಾಯಿತು.ಆದರೆ ಆರಂಭದಲ್ಲಿ ಆಯನೂರು ವಲಯ ಅರಣ್ಯಾಧಿಕಾರಿಗಳ ಕಛೇರಿಯಲ್ಲಿ ತನಿಖಾಧಿಕಾರಿಗೆ ವೆಸ್ಟಿಗೇಷನ್ ರಿಪೋರ್ಟ್ ನೀಡಲು ಕೆಲವರು ಹಿಂದೇಟಾಕಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಎಪಿಸಿಸಿಎಪ್ ಗೆ ರಿಪೋರ್ಟ್ ಮಾಡ್ತಿನಿ ಎಂದು ಆ ತನಿಖಾಧಿಕಾರಿ ಹೇಳುತ್ತಿದ್ದಂತೆ ಪ್ರಕರಣದ ದಾಖಲೆಗಳು ಆಲ್ವಿನ್ ಕೈಸೇರಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    Demo

    ಮರಗಳ್ಳರ ಜೊತೆ ಸದ್ದಾಂ ಹುಸೇನ್ ಪಾತ್ರವಿರುದು ಸ್ಪಷ್ಟವಾಗಿದೆ. ಆತ ಮರ ಕಡಿಸಿದ್ದು, ಮರಗಳ್ಳರ ಜೊತೆ ಮಾತನಾಡಿರುವ ಆಡಿಯೋ ಸಾಕ್ಷಿ ಸಮೇತ ಇದ್ದ ಸಂದರ್ಭದಲ್ಲಿ ರೆಗ್ಯುಲರ್ ಡಿಸಿಎಪ್ ಆದವರು ಮೊದಲು ಸಿಬ್ಬಂದಿಯನ್ನು ಅಮಾನತ್ತುಗೊಳಿಸಿ, ನಂತರ ತನಿಖೆಗೆ ಆದೇಶ ಮಾಡಬೇಕಿತ್ತು. ಆದರೆ ರೆಗ್ಯುಲರ್ ಡಿಸಿಎಫ್ ರವರು, ಸದ್ದಾಂ ಹುಸೇನರನ್ನು ಆಯನೂರು ಉಪ ವಿಭಾಗದದಲ್ಲಿ ಖಾಲಿ ಇರುವ ಐ.ಸಿ.ಟಿ ಘಟಕಕ್ಕೆ ವರ್ಗಾವಣೆ ಮಾಡಿ, ತನಿಖೆಗೆ ಆದೇಶ ಮಾಡಿದ್ದಾರೆ. ಅದು ಆಡಳಿತದ ಹಿತದೃಷ್ಟಿಯಿಂದ ಎಂದು ವರ್ಗಾವಣೆ ಆದೇಶದಲ್ಲಿ ಉಲ್ಲೇಖಿಸಿರುವುದು ಹಾಸ್ಯಾಸ್ಪದವಾಗಿದೆ.

    ಇಂತಹ ಗಂಭೀರ ಪ್ರಕರಣಗಳು ಯಾವುದೇ ಇಲಾಖೆಗಳಲ್ಲಿ ನಡೆದ್ರೂ, ಮೊದಲು ಅಂತಹ ಅಧಿಕಾರಿ ಸಿಬ್ಬಂದಿಯನ್ನು ಮೊದಲು ಅಮಾನತ್ತುಗೊಳಿಸಿ ನಂತರ ಡಿಇ ಕಂಡಕ್ಟ್ ಮಾಡಲಾಗುತ್ತದೆ. ಆದ್ರೆ..ಈ ಪ್ರಕರಣದಲ್ಲಿ ಸಾಕ್ಷಿ ಎಲ್ಲವೂ ಕಣ್ಣಿಗೆ ಕಾಣುತ್ತಿದ್ದರೂ, ಫಾರೆಸ್ಟ್ ಗಾರ್ಡ್ ಗೆ ವರ್ಗಾವಣೆ ಉಡುಗೊರೆ ನೀಡಿ ಕಳಿಸಲಾಗಿರುವುದು ನಿಜಕ್ಕು ದುರಂತವೇ ಸರಿ. ಇನ್ನು ಇಲಾಖೆಯಲ್ಲಿ ಧೀರ್ಘಕಾಲ ಕರ್ತವ್ಯ ನಿರ್ವಹಿಸಬೇಕಾದ ಸದ್ದಾಂ ಹುಸೇನ್ ರಂತ ಯುವ ಅಧಿಕಾರಿಗಳು, ಈ ರೀತಿ ಕಾಡುಗಳ್ಳರ ಜೊತೆ ಕೈ ಜೋಡಿಸಿದರೆ, ಭವಿಷ್ಯದಲ್ಲಿ ಅರಣ್ಯ ಉಳಿಯಲು ಸಾಧ್ಯವೇ..ಇದನ್ನು ಗಂಭೀರವಾಗ ಪರಿಗಣಿಸಬೇಕಿದ್ದ ಡಿಸಿಎಫ್ ಶಿವಶಂಕರ್, ಮೊದಲು ಸದ್ದಾಂ ರನ್ನು ಅಮಾನತ್ತುಗೊಳಿಸಿ ಆದೇಶ ಮಾಡಬೇಕಿತ್ತು ಎಂದು ಇಲಾಖೆಯ ಆಂತರೀಕ ವಲಯದಲ್ಲೇ ಕೇಳಿ ಬರುತ್ತಿರುವ ಮಾತಾಗಿದೆ.

    Share. Facebook Twitter LinkedIn Email WhatsApp

    Related Posts

    ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಎಸ್‌ಟಿ ಮೀಸಲಾತಿಗಾಗಿ ಪಾದೆಯಾತ್ರೆ: ಕೆ.ಪಿ. ನಂಜುಂಡಿ ಭಾಗಿ

    January 29, 2023

    ಮೈಸೂರು ವಿವಿಯಲ್ಲಿ ರಾಜ್ಯ ಮಟ್ಟದ ಜಾನಪದ ಪ್ರಪಂಚ ಜಾನಪದ ಪ್ರಶಸ್ತಿ ಪ್ರದಾನ

    January 29, 2023

    ನಾಡಿನ ಶ್ರೇಷ್ಠ ಉದ್ಯಮಿ ಅಂಬಾದಾಸ್ ಕಾಮೂರ್ತಿ: ಶ್ರೀ ಶ್ರೀಮದ್ ಜಗದ್ಗುರು ಶಿವಶಂಕರ್ ಶಿವಾಚಾರ್ಯ ಮಹಾಸ್ವಾಮಿಗಳು

    January 29, 2023

    ಪ್ರಜಾಧ್ವನಿ ಯಾತ್ರೆಯಿಂದ ಬಿಜೆಪಿಗೆ ಭಯ ಶುರುವಾಗಿದೆ: ಸಿದ್ದರಾಮಯ್ಯ

    January 29, 2023

    ಸಿದ್ದರಾಮಯ್ಯ ತಾಕತ್ ಇದ್ದರೆ, ಸ್ವಂತ ಪಕ್ಷ ಕಟ್ಟಿ, ಬರೀ 5 ಸೀಟು ಗೆಲ್ಲಲಿ: ಕುಮಾರಸ್ವಾಮಿ

    January 29, 2023

    ಕಾಂಗ್ರೆಸ್ ಸರಕಾರ ರಾಜ್ಯವನ್ನು ಅಂಧಕ್ಕಾರದಲ್ಲಿ ಮುಳುಗಿಸುತ್ತೆ: ಅರುಣ್ ಸಿಂಗ್

    January 29, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.