ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚಾಗುತ್ತಿದ್ದು, ಹಿಂದೆ 800 ರಿಂದ 1000 ಪ್ರಕರಣಗಳು ವರದಿಯಾಗುತ್ತಿದ್ದ ನಗರದಲ್ಲಿ ಇದೀಗ 10 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆ ಆಗುತ್ತಿದ್ದಾರೆ. ಹೀಗಾಗಿ ಕೊರೋನಾ ಸೋಂಕಿನಿಂದ ಸಾಯುವವರಿಗೆ ಚಿತಾಗಾರಗಳನ್ನ ನಿಗದಿ ಮಾಡಿದೆ. ಪಾಲಿಕೆ ವ್ಯಾಪ್ತಿಯಲ್ಲಿ 12 ರುದ್ರಭೂಮಿಗಳಿದ್ದು ಅದರಲ್ಲಿ 7 ಚಿತಾಗಾರಗಳನ್ನ ಕೊರೋನಾ ರೋಗದಿಂದ ಸಾಯುವವರಿಗೆ ಮೀಸಲಿಡಲಾಗಿದೆ. ಎಮ್‌ಎಸ್ ಪಾಳ್ಯ ಚಿತಾಗಾರ, ಕೂಡ್ಲು ಕೇಂದ್ರ ಚಿತಾಗಾರ, ಪಣತ್ತೂರು ಚಿತಾಗಾರ, ಕೆಂಗೇರಿ ಹಿಂದೂ ರುಧ್ರಭೂಮಿ, ಸುಮ್ಮನಹಳ್ಳಿ ಚಿತಾಗಾರ, ಪೀಣ್ಯ ಚಿತಾಗಾರ ಹಾಗೂ ಬನಶಂಕರಿ ಚಿತಾಗಾರ ಸೇರಿದಂತೆ ಒಟ್ಟು ಏಳು ಚಿತಾಗಾರಗಳನ್ನ ಕೋವಿಡ್ ನಿಂದ ಮೃತರಾಗುವವರಿಗೆ ನಿಗದಿ ಮಾಡಿದೆ.
