ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಿನಿ ಹರಾಜಿಗೆ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಆಲ್ರೌಂಡರ್ ಡೇವಿಡ್ ವಿಲ್ಲಿ ಅವರು ಆರ್ಸಿಬಿ ಫ್ಯಾನ್ಸ್ಗೆ ಭಾವುಕ ಸಂದೇಶವನ್ನು ಬರೆದಿದ್ದಾರೆ. ಇವರು ಎರಡು ಆವೃತ್ತಿಯಲ್ಲಿ ಆರ್ಸಿಬಿ ತಂಡವನ್ನು ಪ್ರತಿನಿಧಿಸಿದ್ದರು.
2022ರ ಐಪಿಎಲ್ ಮೆಗಾ ಹರಾಜಿನಲ್ಲಿ ಬೆಂಗಳೂರು ಫ್ರಾಂಚೈಸಿ ಮೂಲ ಬೆಲೆ 2 ಕೋಟಿ ರೂ. ಗಳಿಗೆ ಡೇವಿಡ್ ವಿಲ್ಲಿ ಅವರನ್ನು ಖರೀದಿಸಿತ್ತು. ಈ ಎರಡೂ ಆವೃತ್ತಿಗಳಲ್ಲಿ ಆಡಿದ 8 ಪಂದ್ಯಗಳಿಂದ ಇವರು 53 ರನ್ಗಳು ಹಾಗೂ 4 ವಿಕೆಟ್ಗಳನ್ನು ಕಬಳಿಸಿದ್ದರು. ಇದಕ್ಕೂ ಮುನ್ನ 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ವಿಲ್ಲಿ ಆಡಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೊತೆಗಿನ ಪ್ರತಿಯೊಂದು ನಿಮಿಷವನ್ನು ನಾನು ಇಷ್ಟಪಡುತ್ತೇನೆ. ಭವಿಷ್ಯದಲ್ಲಿ ಆರ್ಸಿಬಿ ಅಭಿಮಾನಿಗಳ ಎದುರಿಗೆ ಮರಳುತ್ತೇನೆಂಬ ವಿಶ್ವಾಸ ನನಗಿದೆ. ಇಲ್ಲಿ ಸಿಕ್ಕಿರುವ ನೆನಪುಗಳಿಗೆ ಧನ್ಯವಾದ,” ಎಂದು ಡೇವಿಡ್ ವಿಲ್ಲೀ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕಿದ್ದಾರೆ. ಇದಕ್ಕೆ ಆರ್ಸಿಬಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಹಾಗೂ ಮತ್ತೆ ನೀವು ಆರ್ಸಿಬಿಗೆ ಬನ್ನಿ ಎಂದು ಶುಭ ಕೋರಿದ್ದಾರೆ.