ಖರ್ಜೂರದಷ್ಟು ಪೌಷ್ಠಿಕಾಂಶಗಳು ಇರುವ ಹಣ್ಣು ಮತ್ತೊಂದು ಇಲ್ಲವೆಂದೇ ಹೇಳಬಹುದು. ಇದು ತುಂಬಾ ರುಚಿಕರ ಮಾತ್ರವಲ್ಲದೆ, ಆರೋಗ್ಯಕ್ಕೂ ಹಲವಾರು ಲಾಭ ಗಳನ್ನು ಒದಗಿಸುವುದು. ಇದನ್ನು ನಿತ್ಯವೂ ಸೇವನೆ ಮಾಡಿದರೆ ಅದರಿಂದ ನೀವು ಊಹಿಸದೆ ಇರುವ ಲಾಭಗಳು ದೇಹಕ್ಕೆ ಸಿಗುವುದು. ಆದರೆ ನಾವೆಲ್ಲರೂ ಯಾವಾ ಗಲೊಮ್ಮೆ ಇದನ್ನು ತಂದು ಒಂದರೆಡು ತಿಂದು ಮತ್ತೆ ಮರೆತೇ ಬಿಡುತ್ತೇವೆ. ಆದರೆ ದಿನನಿತ್ಯವೂ ಒಂದು ಖರ್ಜೂರ ತಿಂದರೆ ಅದರಿಂದ ಹಲವಾರು ಬಗೆಯ ಆರೋಗ್ಯ ಲಾಭಗಳು ಸಿಗುವುದು.
Breaking News: ಬಾರ್ ಅಂಡ್ ರೆಸ್ಟೋರೆಂಟ್ಗಳಲ್ಲಿ ಸಿಗ್ತಿಲ್ಲ ಮದ್ಯ; ಕುಡುಕರು ಕಂಗಾಲು!
ನಾವು ಮನೆಯಲ್ಲಿ ವಿಶೇಷ ಸಂದರ್ಭಗಳು ಬಂದಂತಹ ಸಮಯದಲ್ಲಿ ಸಿಹಿ ಅಡುಗೆಗಳನ್ನು ಮಾಡುತ್ತೇವೆ. ಆ ಸಂದರ್ಭದಲ್ಲಿ ಡ್ರೈ ಫ್ರೂಟ್ಸ್ ಗಳನ್ನು ಹೆಚ್ಚಾಗಿ ಬಳಸುತ್ತೇವೆ. ಇದರಲ್ಲಿ ಬಾದಾಮಿ, ಗೋಡಂಬಿ, ಒಣ ದ್ರಾಕ್ಷಿ, ಖರ್ಜೂರ, ಪಿಸ್ತಾ ಇತ್ಯಾದಿಗಳು ಸೇರಿರುತ್ತವೆ.
ಯಾವ ಸಿಹಿ ಅಡುಗೆಗೆ ಖರ್ಜೂರ ಹಾಕುತ್ತೇವೆ, ಅಂತಹ ಅಡುಗೆಯ ಸ್ವಾದ ಬೇರೆಯೇ ಇರುತ್ತದೆ. ಆದರೆ ಖರ್ಜೂರವನ್ನು ಕೇವಲ ಇಂತಹ ಸಂದರ್ಭಗಳಲ್ಲಿ ಮಾತ್ರ ತಿನ್ನುವುದಲ್ಲ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು. ಆಗ ಹಲವು ಲಾಭಗಳು ನಿಮಗೆ ಸಿಗುತ್ತವೆ.
ತೂಕ ಇಳಿಕೆ: ಖರ್ಜೂರವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ತೂಕ ಕಡಿಮೆಯಾಗುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಎದ್ದ ತಕ್ಷಣ ಖರ್ಜೂರವನ್ನು ತಿನ್ನಬೇಕು. ಏಕೆಂದರೆ ಇದು ನಿಮಗೆ ದೀರ್ಘಕಾಲ ಹಸಿವನ್ನುಂಟು ಮಾಡುವುದಿಲ್ಲ.
ಶಕ್ತಿಯನ್ನು ಹೆಚ್ಚಿಸುತ್ತದೆ : ದಿನನಿತ್ಯ ಖಾಲಿ ಹೊಟ್ಟೆಯಲ್ಲಿ ಖರ್ಜೂರವನ್ನು ತಿಂದರೆ ದೇಹಕ್ಕೆ ದಿನವಿಡೀ ಶಕ್ತಿ ಇರುತ್ತದೆ. ವಾಸ್ತವವಾಗಿ, ಈ ಸಿಹಿ ಹಣ್ಣು ಕಬ್ಬಿಣಾಂಶದಲ್ಲಿ ಸಮೃದ್ಧವಾಗಿದೆ. ಇದು ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ನಿಮಗೆ ಶಕ್ತಿಯನ್ನು ನೀಡುತ್ತದೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತೆ: ಹೊಟ್ಟೆಯ ಅಸ್ವಸ್ಥತೆಯಿಂದ ಬಳಲುತ್ತಿರುವವರು ಬೆಳಗ್ಗೆ ಬೇಗನೆ ಖರ್ಜೂರವನ್ನು ತಿನ್ನಬೇಕು. ಇದರಲ್ಲಿರುವ ಫೈಬರ್ ಜೀರ್ಣಕ್ರಿಯೆ ಮತ್ತು ಕರುಳಿನ ಚಲನೆಯನ್ನು ಸುಗಮಗೊಳಿಸುತ್ತದೆ. ಇದು ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ಟ್ ಸಮಸ್ಯೆ ನಿವಾರಿಸುತ್ತದೆ.
ಸಿಹಿತಿಂಡಿಗಳ ಹಂಬಲವನ್ನು ಕಡಿಮೆ ಮಾಡುತ್ತೆ: ಅನೇಕ ಮಂದಿ ಸಿಹಿತಿಂಡಿ ತಿನ್ನಬೇಕು ಹಂಬಲವನ್ನು ಹೊಂದಿರುತ್ತಾರೆ. ಆದರೆ ಅತಿಯಾಗಿ ಸಿಹಿತಿಂಡಿಗಳನ್ನು ತಿನ್ನುವುದರಿಂದ ಬೊಜ್ಜು ಮತ್ತು ಮಧುಮೇಹದಂತಹ ಸಮಸ್ಯೆಗಳು ಉಂಟಾಗಬಹುದು. ನಿಮ್ಮ ಸಿಹಿ ಕಡುಬಯಕೆಗಳನ್ನು ನಿಗ್ರಹಿಸಲು ಡೇಟ್ಸ್ ನಿಮ್ಮ ಅತ್ಯುತ್ತಮ ಆಯ್ಕೆಯಾಗಿದೆ.