ಬೆಂಗಳೂರು: ರಾಜ್ಯದಲ್ಲಿ ಜಾತಿ ಜನಗಣತಿ (Caste Census) ವರದಿ ಸಲ್ಲಿಕೆಗೆ ದಿನಾಂಕ ನಿಗದಿಯಾಗಿದೆ. ಇದೇ ಶುಕ್ರವಾರ ಹಿಂದುಳಿದ ವರ್ಗಗಳ ಆಯೋಗ ಜಾತಿ ಜನಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ.
ಈ ಜಾತಿ ಜನಗಣತಿ ವರದಿ ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸುವ ಸಾಧ್ಯತೆಯಿದೆ. ಇದು ಮುಂದಿನ ಲೋಕಸಭೆ ಚುನಾವಣೆ ಮೇಲೆಯೂ ಪರಿಣಾಮ ಬೀರಲಿದೆ ಎಂದು ರಾಜ್ಯ ಗುಪ್ತಚರ ಇಲಾಖೆ (Intelligence Bureau) ಎಚ್ಚರಿಸಿದೆ
Breaking News: ಹಿರಿಯ ನಟಿ ಲೀಲಾವತಿ ತೋಟದ ಗೇಟ್ ಬಳಿ ಚಿರತೆ ಪ್ರತ್ಯಕ್ಷ
ಇದರ ಸಾಧಕ ಭಾದಕಗಳ ವಿವರಗಳನ್ನು ಗುಪ್ತಚರ ಇಲಾಖೆ ಸಿಎಂಗೆ ವರದಿ ಸಲ್ಲಿಸಿದೆ. ಇದರಲ್ಲಿ ವರದಿಗೆ ಪ್ರಬಲ ಲಿಂಗಾಯತ (Lingayat), ಒಕ್ಕಲಿಗ (Vokkaliga) ಸಮುದಾಯಗಳಿಂದ ತೀವ್ರ ವಿರೋಧ ಬರಲಿದೆ. ಪ್ರತಿಭಟನೆಗಳು ತೀವ್ರಗೊಳ್ಳಲಿದ್ದು, ಇದಕ್ಕೆ ಕೆಲ ಕಾಂಗ್ರೆಸ್ (Congress) ಮುಖಂಡರೂ ಕೈಜೋಡಿಸಬಹುದು. ಪಕ್ಷದೊಳಗೂ ಬಿರುಕು ಸೃಷ್ಟಿಯಾಗುವ ಸಂಭವ ಇದೆ ಎಂದು ಎಚ್ಚರಿಕೆ ನೀಡಿದೆ ಎನ್ನಲಾಗಿದೆ.
ಸಮುದಾಯವಾರು ಭಿನ್ನಾಭಿಪ್ರಾಯ, ಸಂಘರ್ಷಕ್ಕೂ ಕಾರಣವಾಗಬಹುದು. ಒಬಿಸಿ ವರ್ಗಗಳು ಕಾಂಗ್ರೆಸ್ ಕಡೆ ಮುಖ ಮಾಡಬಹುದು. ಆದರೆ ಲಿಂಗಾಯತ ಸಮುದಾಯ ವಿಮುಖರಾಗಬಹುದು. ಒಕ್ಕಲಿಗ ಸಮುದಾಯ ಕೂಡ ಧ್ರುವೀಕರಣ ಆಗಬಹುದು. ಗ್ಯಾರಂಟಿಗಳ ಲಾಭ ದಕ್ಕದೇ ಹೋಗಬಹುದು ಎಂದು ಗುಪ್ತಚರ ವರದಿ ತಿಳಿಸಿದೆ ಎನ್ನಲಾಗಿದೆ