ಚಾಲೆಂಜಿಂಗ್ ಸ್ಟಾರ್ ನಟ ನಟ ದರ್ಶನ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಪ್ರತಿ ದರ್ಶನ್ ಹುಟ್ಟುಹಬ್ಬವೆಂದರೆ ಅದು ಅಭಿಮಾನಿಗಳ ಪಾಲಿನ ದೊಡ್ಡ ಜಾತ್ರೆ. ಆದರೆ, ಈ ಬಾರಿ ದರ್ಶನ್ ಹುಟ್ಟುಹಬ್ಬ ಆಚರಿಸುತ್ತಿಲ್ಲ. ಇತ್ತೀಚೆಗಷ್ಟೇ ಈ ಬಾರಿ ಹುಟ್ಟುಹಬ್ಬ ಆಚರಿಸುತ್ತಿಲ್ಲ ಎಂದು ದರ್ಶನ್ ಮನವಿ ಮಾಡಿದ್ದಾರೆ.
ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ ; ಅಧಿಕಾರಿಗಳು, ಪ್ರತ್ಯಕ್ಷ ದರ್ಶಿಗಳು ಹೇಳಿದ್ದೇನು..?
ಸದ್ಯ ದರ್ಶನ್ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸುವತ್ತ ಗಮನ ಹರಿಸಿದ್ದಾರೆ. ಅದೇ ಕಾರಣದಿಂದ ಹೊಸ ಸಿನಿಮಾಗಳ ಘೋಷಣೆಯಾಗಿಲ್ಲ. ಸದ್ಯ ದರ್ಶನ್ ಮೊದಲ ಆಯ್ಕೆ “ಡೆವಿಲ್”. ಈಗಾಗಲೇ ಒಂದಷ್ಟು ಚಿತ್ರೀಕರಣ ಪೂರೈಸಿರುವ ಈ ಚಿತ್ರದ ಟೀಸರ್ ಇಂದು ಬಿಡುಗಡೆಯಾಗುತ್ತಿದೆ.
ದಾಸ ದರ್ಶನ್ ಸಿನಿಮಾ ಜೀವನದಲ್ಲಿ ಏರಿಳಿತಗಳಿವೆ. ಸೋಲು ಗೆಲುವು ಕೂಡ ಇವೆ. ಸೋತ ಸಿನಿಮಾಗಳ ಲೆಕ್ಕ ಒಂದು ಕಡೆ ಆದ್ರೆ, ಗೆದ್ದ ಸಿನಿಮಾಗಳ ವಿಚಾರ ಮತ್ತೊಂದು ಕಡೆ ಇದೆ. ಆದರೆ, ದರ್ಶನ್ ಸಿನಿಮಾ ಜೀವನ ಆರಂಭವಾಗಿರೋದು ಸಾಮಾನ್ಯ ಕ್ಯಾಮರಾ ಸಹಾಯಕನಾಗಿಯೇ ಅನ್ನೋದು ಗೊತ್ತೇ ಇದೆ.
ಅಪ್ಪ ನಟನಾದ್ರೂ ದರ್ಶನ್ ತೂಗುದೀಪ್ ಅವರಿಗೆ ಚಂದನವನಕ್ಕೆ ಕಾಲಿಡೋದು ಸುಲಭದ ಮಾತಾಗಿರಲಿಲ್ಲ. ಲೈಟ್ ಬಾಯ್ ಚಿತ್ರರಂಗೆ ಬಂದ ದರ್ಶನ್ ಸ್ಟಾರ್ ನಟನಾಗಿ ಮಿಂಚಿದ್ರು. ಗಾಡ್ ಫಾದರ್ ಇಲ್ಲದೆ ಎಂಟ್ರಿ ಕೊಟ್ಟ ದರ್ಶನ್ ಹಂತ ಹಂತವಾಗಿ ಬೆಳೆದ್ರು.
ಮೆಜೆಸ್ಟಿಕ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ದರ್ಶನ್ ನಾಯಕನಾಗಿ ಎಂಟ್ರಿ ಕೊಟ್ರು. ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ನಟಿಸಿ ಯಶಸ್ಸು ಕಂಡ್ರು. ಮಾಸ್ ಹೀರೋ ಆಗಿ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ದರ್ಶನ್ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ.
ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ ; ಅಧಿಕಾರಿಗಳು, ಪ್ರತ್ಯಕ್ಷ ದರ್ಶಿಗಳು ಹೇಳಿದ್ದೇನು..?
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿಜ ಜೀವನದಲ್ಲಿ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲುವಾಸ ಅನುಭವಿಸಿದ್ರು. ಕೊಲೆ ಆರೋಪಿಯಾಗಿದ್ದು, ಬೇಲ್ ಮೇಲೆ ಹೊರಗೆ ಬಂದಿದ್ದಾರೆ.
ನಟ ದರ್ಶನ್ ಅವರು 100 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ ಎನ್ನಲಾಗ್ತಿದೆ. ಬೆಂಗಳೂರಿನಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಮನೆ, ಅಪಾರ್ಟ್ಮೆಂಟ್, ಮೈಸೂರಿನಲ್ಲಿ ಫಾರ್ಮ್ ಹೌಸ್, ಜೊತೆ ಜಮೀನ ಮೇಲೂ ದರ್ಶನ್ ಹಣ ಹೂಡಿಕೆ ಮಾಡಿದ್ದಾರೆ ಎನ್ನಲಾಗ್ತಿದೆ.
ನಟ ದರ್ಶನ್ ಅವರು ತೂಗುದೀಪ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ಕೆಲ ಸಿನಿಮಾಗಳನ್ನು ಕೂಡ ದರ್ಶನ್ ತಮ್ಮದೇ ಬ್ಯಾನರ್ ನಲ್ಲಿ ನಿರ್ಮಿಸಿದ್ದಾರೆ. ನಟ ದರ್ಶನ್ ಅವರಿಗೆ ವಾಚ್ ಕ್ರೇಜ್ ಕೂಡ ಇದೆಯಂತೆ ಕೋಟ್ಯಾಂತರ ರೂಪಾಯಿ ಮೌಲ್ಯದ ವಾಚ್ ಗಳ ಕಲೆಕ್ಷನ್ ಹೊಂದಿದ್ದಾರೆ ಎನ್ನಲಾಗಿದೆ.
ದರ್ಶನ್ ಅವರಿಗೆ ದುಬಾರಿ ಕಾರುಗಳ ಮೇಲ ತುಸು ಹೆಚ್ಚಿನ ಕ್ರೇಜ್ ಕೂಡ ಇದೆ. ನಟ ದರ್ಶನ್ ಗ್ಯಾರೇಜ್ ನಲ್ಲಿ ಐಷಾರಾಮಿ ಕಾರುಗಳದ್ದೇ ದರ್ಬಾರ್ ಆಗಿದೆ. 1 ಕೋಟಿಯ ಪೋರ್ಡ್ ಮಸ್ಟಾನ್ ಅಷ್ಟೇ ಅಲ್ಲದೇ ರೇಂಜ್ ರೋವರ್ ಡಿಫೆಂಡರ್, ಲ್ಯಾಂಬೋರ್ಗಿನಿ ಅವೆಂಟಡೋರ್ ಇದೆ.
ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟ ದರ್ಶನ್ ಹಲವು ಸಂದರ್ಶನಗಳಲ್ಲಿ ಕಷ್ಟದ ದಿನಗಳ ಬಗ್ಗೆ ಮಾತಾಡಿದ್ರು. ಲೈಟ್ ಬಾಯ್ ಆಗಿದ್ದ ವೇಳೆ ದಿನಕ್ಕೆ ಕೇವಲ 90 ರೂಪಾಯಿ ಸಂಬಳ ಕೂಡ ಪಡೆದಿದ್ದಾರಂತೆ. ಹಲವು ಸೂಪರ್ ಹಿಟ್ ಸಿನಿಮಾ ಕೊಟ್ಟ ದರ್ಶನ್, ಸದ್ಯ ಸಿನಿಮಾ ಒಂದಕ್ಕೆ 22 ಕೋಟಿ ಸಂಭಾವನೆ ಪಡೆಯುತ್ತಾರೆ ಎಂದು ವರದಿ ಆಗಿದೆ