ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಡದಿ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ. ಹೊಸ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಾರೆ. ಅದರಂತೆ ಇಂದು ಬೆಂಗಳೂರಿನ ಫೇಮಸ್ ರೆಸ್ಟೋರೆಂಟ್ ವೊಂದರಲ್ಲಿ ಸ್ಟೈಲೀಶ್ ಲುಕ್ ನಲ್ಲಿ ಕ್ಯಾಮೆರಾಗೆ ಕಣ್ಣು ಹೊಡೆದಿದ್ದಾರೆ. ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ಒಡೆತನದ ರೆಸ್ಟೋರೆಂಟ್ ಎನ್ನಲಾದ ಬಾಸ್ಟಿಯನ್ ಗಾರ್ಡನ್ ಸಿಟಿಯಲ್ಲಿ ದಾಸನ ಮಡದಿ ಪ್ರತ್ಯಕ್ಷರಾಗಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಅತ್ಯಂತ ಖ್ಯಾತಿ ಪಡೆದಿರುವ ಈ ಹೋಟೆಲ್ ನಲ್ಲಿ ಒಂದು ಫ್ಲೆಟ್ ಫುಡ್ ಬೆಲೆ ಎರಡು ಸಾವಿರವಂತೆ. ಇಂತಹ ಫೇಮಸ್ ರೆಸ್ಟೋರೆಂಟ್ ನಲ್ಲಿ ವಿಜಯಲಕ್ಷ್ಮಿ ದರ್ಶನ್ ಮಾರ್ಡನ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯಲಕ್ಷ್ಮಿ ಫೋಟೋಗಳನ್ನು ನೋಡಿ ಅಭಿಮಾನಿಗಳು ನಮ್ಮ ಅತ್ತಿಗೆ ದೇವತೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಚಿತ್ರರಂಗದಲ್ಲಿ ವಿಜಯಲಕ್ಷ್ಮಿ ಆಕ್ಟೀವ್
ದರ್ಶನ್ ತಮ್ಮ ಆತ್ಮೀಯರು ಹಾಗೂ ಹೊಸಬರ ಸಿನಿಮಾಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ದಚ್ಚುವಂತೆ ಮಡದಿ ವಿಜಯಲಕ್ಷ್ಮಿ ಕೂಡ ತಮ್ಮ ಆತ್ಮೀಯರ ಚಿತ್ರಗಳಿಗೆ ಸಾಥ್ ಕೊಡುತ್ತಿದ್ದಾರೆ. ಇತ್ತೀಚೆಗಷ್ಟೇ ಧನ್ವೀರ್ ನಟನೆಯ ವಾಮನ ಸಿನಿಮಾದ ಹಾಡು ಬಿಡುಗಡೆ ಮಾಡಿ ವಿಜಯಲಕ್ಷ್ಮಿ ಬೆಸ್ಟ್ ವಿಷಸ್ ತಿಳಿಸಿದ್ದರು.