ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಆರೋಪಿಯಾಗಿ ಜೈಲು ಸೇರೋದಕ್ಕೂ ಮೊದಲು ದರ್ಶನ್ ಜಿಮ್ನಲ್ಲಿ ಗಂಟೆಗಟ್ಟಲೆ ವರ್ಕೌಟ್ ಮಾಡುತ್ತಿದ್ದರು. ಸದ್ಯ ಜೈಲಲಿದ್ದರೂ ದರ್ಶನ್ ದೇಹ ಕಾಪಾಡಿಕೊಳ್ಳುವುದು ಬಿಟ್ಟಿಲ್ಲ. ಹೀಗಾಗಿ ಅನ್ನ ಬಿಟ್ಟು ಚಪಾತಿ, ಮುದ್ದೆ ಊಟಕ್ಕೆ ಮೊರೆ ಹೋಗಿದ್ದಾರೆ. ಜೊತೆಗೆ ವಿಟಮಿನ್ ಟ್ಯಾಬ್ಲೆಟ್ ಸೇವಿಸುತ್ತಿದ್ದಾರೆ.
ಆರೋಪಿ ದರ್ಶನ್ ಜೈಲಿನಲ್ಲಿ ಮಾನಸಿಕವಾಗಿ ಕುಗ್ಗಿದ್ದರೂ, ಬಾಡಿ ಫಿಟ್ನೆಸ್ಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಜಿಮ್ ಬಾಡಿ ಕಾಪಾಡಿಕೊಳ್ಳದಿದ್ದರೆ ಬಾಡಿ ಶೇಪ್ ಹಾಳಾಗುವ ಆತಂಕ ದರ್ಶನ್ ಅವರನ್ನು ಕಾಡುತ್ತಿದೆ. ಸಾಮಾನ್ಯವಾಗಿ ಒಮ್ಮೆಲೆ ಜಿಮ್ ಬಿಟ್ಟರೆ ಚರ್ಮ ಜೋತು ಬಿದ್ದು ವಿಲಕ್ಷಣವಾಗತ್ತೆ. ಹೀಗಾಗಿ ದರ್ಶನ್ ದೇಹದ ಕಡೆ ಹೆಚ್ಚು ಗಮನ ಕೊಡ್ತಿದ್ದಾರೆ.
Agnipath Scheme: ಅಗ್ನಿಪಥ್ ಯೋಜನೆಯಲ್ಲಿ ಬದಲಾವಣೆಗೆ ಮುಂದಾದ ಕೇಂದ್ರ: ಈ ನಿಯಮಗಳು ಪರಿಷ್ಕರಣೆ ಸಾಧ್ಯತೆ
ಸದ್ಯ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರೋ ಆರೋಪಿ ದರ್ಶನ್ಗೆ ಜಿಮ್ ಮಾಡೋದಕ್ಕೆ ಅವಕಾಶವೇ ಇಲ್ಲ. ಹೀಗಾಗಿ ನಿತ್ಯ ವಾಕಿಂಗ್ ಮಾಡುತ್ತಿದ್ದಾರೆ. ಬೆಳಗ್ಗೆ ಬೇಗ ಎದ್ದೇಳುವ ದರ್ಶನ್ ರಾತ್ರಿ ಬೇಗ ಮಲಗುತ್ತಿದ್ದಾರೆ. ಅಲ್ಲದೇ ಬೆಳಗ್ಗೆ ಎದ್ದ ಕೂಡಲೇ ಸ್ವಲ್ಪ ಮಟ್ಟಿಗೆ ವರ್ಕೌಟ್ ಜೊತೆಗೆ ಗಂಟೆಗಟ್ಟಲೇ ವಾಕಿಂಗ್ ಮಾಡುತ್ತಿದ್ದಾರೆ. ಜೈಲಿನಲ್ಲಿ ಅನ್ನ ತ್ಯಜಿಸಿರೋ ದರ್ಶನ್ ಸ್ವಲ್ಪ ಮಟ್ಟಿಗೆ ತೂಕವನ್ನೂ ಕಳೆದುಕೊಂಡಿದ್ದಾರೆ.
ಕೆಲ ನಿರ್ಮಾಪಕರು ದರ್ಶನ್ ನಂಬಿಕೊಂಡು ಕೋಟಿ ಕೋಟಿ ಹಣ ಸುರಿದಿದ್ದಾರೆ. ಚಿತ್ರಗಳ ಶೂಟಿಂಗ್ ಬಾಕಿ ಇರುವುದರಿಂದ ಅವರಿಗೂ ಆತಂಕ ಶುರುವಾಗಿದೆ. ಹೀಗಾಗಿ ದರ್ಶನ್ ಅವರ ಫಿಟ್ನೆಸ್ ಮೇಲೆ ಇದೀಗ ಎಲ್ಲರ ಚಿತ್ತವೂ ನೆಟ್ಟಿದೆ. ಎಲ್ಲಿ ದರ್ಶನ್ ಅವರು ಜೈಲಿನ ಊಟದಿಂದಾಗಿ ಫಿಟ್ನೆಸ್ ಕಳೆದುಕೊಂಡು ಬಿಡುತ್ತಾರೆ ಅನ್ನೋ ಆತಂಕವೂ ಅವರ ಅಭಿಮಾನಿಗಳಲ್ಲಿದೆ. ಆದರೆ ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಬಾಡಿ ಫಿಟ್ನೆಸ್ ಕಾಪಾಡಿಕೊಳ್ಳುವತ್ತ ದೃಷ್ಟಿ ನೆಟ್ಟಿದ್ದಾರೆ. ದರ್ಶನ್ ಮಾತ್ರ ಎಲ್ಲಿಯೂ ತಮ್ಮ ಫಿಟ್ನೆಸ್ ಕಳೆದುಕೊಳ್ಳುವ ಸಣ್ಣ ಅವಕಾಶಕ್ಕೂ ದಾರಿ ಮಾಡಿಕೊಟ್ಟಿಲ್ಲ.
ದೇಹದ ಫಿಟ್ನೆಸ್ ಕಾಪಾಡಿಕೊಳ್ಳಲು ಜೈಲಿನಲ್ಲಿ ಕಷ್ಟ ಆಗುತ್ತಿದ್ದ ಕಾರಣಕ್ಕೆ ಆರೋಪಿ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ಮನೆ ಊಟಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಕೋರ್ಟ್ ಮನೆಯೂಟಕ್ಕೆ ಅವಕಾಶ ಮಾಡಿಕೊಡದ ಕಾರಣ ಅನ್ನ ತ್ಯಜಿಸಿರೋ ದರ್ಶನ್ ವಿಟಮಿನ್ ಟ್ಯಾಬ್ಲೆಟ್ ಮೊರೆ ಹೋಗಿದ್ದಾರೆ.