ರೇಣುಕಾಸ್ವಾಮಿ ಕೊಲೆ ಕೇಸ್ ನ ವಿಚಾರಣೆ ಅಂತಿಮ ಹಂತ ತಲುಪಿದ್ದು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇದರಿಂದ ನಟ ದರ್ಶನ್ ಗೆ ಮತ್ತಷ್ಟು ಸಂಕಷ್ಟ ಹೆಚ್ಚಾಗಿದೆ. ಚಾರ್ಜ್ಶೀಟ್ನಲ್ಲಿ ಇರುವ ವಿಚಾರಗಳನ್ನು ತಿಳಿದುಕೊಳ್ಳಲು ದರ್ಶನ್ ಹಾತೊರೆಯುತ್ತಿದ್ದಾರೆ. ವಿಷಯ ತಿಳಿಯಲು ದರ್ಶನ್ ಪತ್ನಿಗೆ ಕರೆ ಮಾಡಿದ್ದಾರೆ. ಆದರೆ ಪೂರ್ತಿ ವಿಷಯ ತಿಳಿದುಕೊಳ್ಳುವುದಕ್ಕೂ ಮುನ್ನವೇ ಅವಧಿ ಮುಕ್ತಾಯ ಆಗಿದ್ದರಿಂದ ದರ್ಶನ್ ಪರದಾಡಿದ್ದಾರೆ. ಅಂದ ಹಾಗೆ ಪತ್ನಿ ಜೊತೆ ಮಾತನಾಡಲು ದರ್ಶನ್ ಗೆ ಐದು ನಿಮಿಷ ಮಾತ್ರವೇ ಕಾಲವಕಾಶ ನೀಡಲಾಗಿತ್ತು.
ಬಳ್ಳಾರಿ ಸೆಂಟ್ರಲ್ ಜೈಲ್ ನ ಲ್ಯಾಂಡ್ ಲೈನ್ನಿಂದ ಪತ್ನಿ ವಿಜಯಲಕ್ಷ್ಮಿ ನಂಬರ್ಗೆ ದರ್ಶನ್ ಕರೆ ಮಾಡಿದ್ದಾರೆ. ಅತ್ತ ಕಡೆಯಿಂದ ವಿಜಯಲಕ್ಷ್ಮಿ ಫೋನ್ ರಿಸೀವ್ ಮಾಡುತ್ತಿದ್ದಂತೆಯೇ ದರ್ಶನ್ ಭಾವುಕರಾಗಿದ್ದಾರೆ. 5 ನಿಮಿಷಗಳ ಕಾಲ ಅವರು ಎಮೋಷನಲ್ ಆಗಿಯೇ ಮಾತನಾಡಿದ್ದಾರೆ. ಕುಟುಂಬಸ್ಥರ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಚಾರ್ಜ್ಶೀಟ್ನಲ್ಲಿ ಇರುವ ವಿಚಾರಗಳನ್ನು ತಿಳಿಯಲು ಪ್ರಯತ್ನಿಸಿದ್ದಾರೆ.
ಚಾರ್ಜ್ ಶೀಟ್ ಕುರಿತು ಪತ್ನಿ ಜೊತೆ ಮಾತನಾಡುತ್ತಿದ್ದಂತೆ ಕರೆ ಕಟ್ ಆಗಿದೆ. ಸಿಕ್ಕ 5 ನಿಮಿಷದಲ್ಲಿ ಮುಖ್ಯ ವಿಷಯವನ್ನೇ ಸರಿಯಾಗಿ ಮಾತನಾಡಲಾಗದೆ ಹೊರಗೆ ಏನು ಆಗುತ್ತಿದೆ ಎಂದು ತಿಳಿಯಲು ಸಾಧ್ಯವಾಗದೆ ದರ್ಶನ್ ಪರಿ ತಪಿಸಿದ್ದಾರೆ. ಇದರಿಂದ ಮುಂದಿನ ನಡೆ ಏನು ಎಂದು ಗೊತ್ತಾಗದೆ ದರ್ಶನ್ ಕಂಗಲಾಗಿದ್ದಾರೆ.
ಇಂಥ ತುರ್ತು ಪರಿಸ್ಥಿತಿಯಲ್ಲಿ ಕೂಡ ಪತ್ನಿ ಮತ್ತು ವಕೀಲರ ಜೊತೆ ಸೂಕ್ತವಾಗಿ ಮಾತನಾಡಲು ದರ್ಶನ್ಗೆ ಸಾಧ್ಯವಾಗಿಲ್ಲ. ಅವರ ಸಂಪೂರ್ಣ ಮಾತುಕತೆಯನ್ನು ರೆಕಾರ್ಡ್ ಮಾಡಲಾಗಿದೆ. ಪತ್ನಿಯ ದೂರವಾಣಿ ಕರೆ ಕಟ್ ಆಗುತ್ತಿದ್ದಂತೆಯೇ ದರ್ಶನ್ ಸೆಲ್ ನತ್ತ ಮರಳಿದ್ದಾರೆ.