ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಕೊಲೆ ಪ್ರಕರಣ ತನಿಖೆ ಜಟಿಲವಾಗುತ್ತಿರುವ ಬೆನ್ನಲ್ಲೇ ನಟ ದರ್ಶನ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ದರ್ಶನ್ ಮನೆ ತೆರವು ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಯಾರೇ ಸ್ಟೇ ತಂದಿದ್ದರೂ ಕಾನೂನು ಪ್ರಕಾರ ಕ್ರಮವಹಿಸಿ ತೆರವು ಮಾಡುತ್ತೇವೆ. ನೀನು ಸ್ಟೇ ತಂದಿದ್ರು ತೆರವು ಮಾಡುತ್ತೇವೆ, ನಾನು ಸ್ಟೇ ತಂದಿದ್ರು ತೆರವು ಮಾಡುತ್ತೇವೆ ಎಂದು ಹೇಳಿದರು.
ನಟ ದರ್ಶನ್ ಮನೆ ರಾಜಕಾಲುವೆ ಮೇಲೆ ಇದ್ದರೂ ಸಹ ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಅಲ್ಲದೇ ಇದು ಕೋರ್ಟ್ನಲ್ಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಸೈಲೆಂಟ್ ಆಗಿದ್ದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಅಪಸ್ವರ ಹೇಳಿಬಂದಿದ್ದವು.
Onion Juice: ಖಾಲಿ ಹೊಟ್ಟೆಯಲ್ಲಿ ಈರುಳ್ಳಿ ರಸ ಕುಡಿಯುವುದರಿಂದ ಸಿಗುವ ಪ್ರಯೋಜನಗಳೇನು ಗೊತ್ತಾ..?
ದೊಡ್ಡವರಿಗೆ ಒಂದು ರೂಲ್ಸ್ ಸಾಮಾನ್ಯ ಜನರಿಗೆ ಮತ್ತೊಂದು ರೂಲ್ಸ್ ಎನ್ನುವ ಆರೋಪ ಕೇಳಿಬಂದಿದ್ದವು. ಇದೀಗ ಈ ಬಗ್ಗೆ ಡಿಕೆಶಿ ಪ್ರತಿಕ್ರಿಯಿಸಿದ್ದು, ಕಾನೂನಿನ ಪ್ರಕಾರ ದರ್ಶನ್ ಮನೆ ತೆರವಿಗೆ ಪಾಲಿಕೆ ಅಧಿಕಾರಿಗಳಿಗೆ ಸರ್ಕಾರದಿಂದ ಮೌಖಿಕ ಸೂಚನೆ ನೀಡಿದ್ದು, ಇದೀಗ ನಟ ದರ್ಶನ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.