ತುಗೂದೀಪ ಶ್ರೀನಿವಾಸ್ ಖ್ಯಾತ ಖಳನಾಯಕನಾದರೂ ಅವರ ಪುತ್ರ ದರ್ಶನ್ ಝೀರೋದಿಂದಲೇ ಹೀರೋ ಆದವರು. ಸಾಮಾನ್ಯ ಲೈಟ್ ಬಾಯ್ ಆಗಿದ್ದ ದಾಸ ಚಾಲೆಂಜಿಂಗ್ ಸ್ಟಾರ್ ಆಗಿ ಬೆಳೆದಿದ್ದು ಸ್ವತಃ ಪರಿಶ್ರಮದಿಂದಲೇ. ಅದೇ ಹಾದಿಯಲ್ಲಿ ತಮ್ಮ ಮಗ ಮತ್ತು ಅಕ್ಕನ ಮಗ ಹೋಗಬೇಕು ಎನ್ನುತ್ತುವುದು ದಾಸನ ಅಭಿಪ್ರಾಯ. ಅದನ್ನು ಸಾಕಷ್ಟು ಸಂದರ್ಶನದಲ್ಲಿ ಅವರು ಓಪನ್ ಆಗಿಯೇ ಮಾತನಾಡಿದ್ದಾರೆ. ಮೊದಲು ಕಸ ಹೊಡೆಯುವುದು ಕಲಿಯಲಿ. ಬಳಿಕ ಗಲ್ಲದ ಮೇಲೆ ಕೂರಲಿ. ಹೋಟೆಲ್ನಲ್ಲಿ ಮೊದಲು ಕಸ ಹೊಡೆಯವುದು ಕಲಿಯಬೇಕು. ಆಮೇಲೆ ಗಲ್ಲದ ಮೇಲೆ ಕೂರಬೇಕು. ನೇರವಾಗಿ ಗಲ್ಲದ ಮೇಲೆ ಕೂರಿಸಿದರೆ ಹೋಟೆಲ್ ಬೆಲೆ ಗೊತ್ತಾಗುವುದಿಲ್ಲ ಅಂತಾ ಹೇಳುತ್ತೇನೆ ಇದ್ದರು. ಕಳೆದ ವರ್ಷ ಕಾಟೇರ ಸಿನಿಮಾದಲ್ಲಿ ದರ್ಶನ್ ಅಕ್ಕನ ಮಗ ಚಂದ್ರುಗೆ ಅವಕಾಶ ಸಿಕ್ಕಿತ್ತು. ಕೊಟ್ಟ ಅವಕಾಶವನ್ನು ಚಂದ್ರು ಸಹ ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಹೀಗಾಗಿ ಡೆವಿಲ್ ಸಿನಿಮಾದಲ್ಲಿಯೂ ಚಂದ್ರುಗಾಗಿ ಅಂತಾ ಒಂದು ಪಾತ್ರ ಮೀಸಲಿಡಲಾಗಿತ್ತು. ಆದರೀಗ ಡೆವಿಲ್ ಸಿನಿಮಾದಿಂದ ಅಕ್ಕನ ಮಗನಿಂದ ದರ್ಶನ್ ಕೋಕ್ ಕೊಟ್ಟಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಜೈಲು ಪಾಲಾದಾಗ ವಿಜಯಲಕ್ಷ್ಮಿಗೆ ಬೆನ್ನೆಲುಬಾಗಿ ನಿಂತವರಲ್ಲಿ ಒಬ್ಬರು ಚಂದು. ಹೀಗಾಗಿ ಚಂದು ಕಂಡರೆ ದಾಸನ ಸೆಲೆಬ್ರಿಟಿಗಳಿಗೆ ವಿಶೇಷವಾದ ಪ್ರೀತಿ. ಅದರಲ್ಲಿಯೂ ದರ್ಶನ್ ಅಕ್ಕನ ಮಗ ಅಂದ್ರೆ ಪ್ರೀತಿ ತುಸು ಹೆಚ್ಚಾಗಿಯೇ ಇರುತ್ತದೆ. ಇದೇ ಪ್ರೀತಿ, ಅಭಿಮಾನಿ ಚಂದ್ರುಗೆ ಮಗ್ಗಲ ಮುಳ್ಳಲಾಗಿದೆ. ಯಾಕೆಂದರೆ ದರ್ಶನ್ ಅಭಿಮಾನಿಯೊಬ್ಬನ ಎಡವಟ್ಟಿನಿಂದ ಡೆವಿಲ್ ಚಿತ್ರದಲ್ಲಿ ಚಂದು ಅವಕಾಶ ಕಳೆದುಕೊಂಡಿದ್ದಾರೆ. ಬೇರೆ ಯಾರು ಅಲ್ಲ ಬದಲಿಗೆ ಖುದ್ದು ದರ್ಶನ್ ನಿರ್ದಯವಾಗಿ ತಮ್ಮ ಅಕ್ಕನ ಮಗ ಚಂದುನ ತಮ್ಮ ಚಿತ್ರದಿಂದ ಹೊರ ಹಾಕಿದ್ದಾರೆ. ಖಡಕ್ ಎಚ್ಚರಿಕೆಯ ಸಂದೇಶವನ್ನು ಕೂಡ ನೀಡಿದ್ದಾರೆ.
https://www.instagram.com/reel/DHD2xo5SODp/?utm_source=ig_web_copy_link
ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ಕುರಿತು ಪ್ರಕಟಣೆಯನ್ನು ಹೊರಡಿಸಿರುವ ದರ್ಶನ್ ”’ಎಲ್ಲಾ ನನ್ನ ಸೆಲೆಬ್ರಿಟಿಸ್ ಗಳಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ನನ್ನ ಮತ್ತು ನಮ್ಮ ಕುಟುಂಬದ ಮೇಲಿಟ್ಟಿರುವ ಪ್ರೀತಿ ಅಭಿಮಾನಕ್ಕೆ ನಾವು ಸದಾ ಚಿರಋಣಿ. ಆದರೆ, ಈ ವೀಡಿಯೊದಲ್ಲಿ ನಮ್ಮ ಮೇಲಿರುವ ಅಭಿಮಾನದಿಂದ ಇನ್ನೂ ಏನು ಸಾಧನೆ ಮಾಡದಿರುವ ನನ್ನ ಅಕ್ಕನ ಮಗನಾದ ಚಂದುಗೆ ಅಭಿಮಾನಿಯೊಬ್ಬರು ಕಾಲಿಗೆ ಬೀಳುವುದನ್ನು ನೋಡಿ ನನ್ನ ಮನಸಿಗೆ ತುಂಬಾ ನೋವಾಗಿದೆ ಆದ್ದರಿಂದ ಡೆವಿಲ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಬೇಕಿದ್ದ ಚಂದುನನ್ನು ಈ ಚಿತ್ರದಿಂದ ಹೊರಗಿಡಲಾಗಿದೆ, ಚಂದು ಅಥವಾ ನನ್ನ ಮಗ ವಿನೀಶ್ಗೆ ನೀವು ಅಭಿಮಾನದಿಂದಲೋ ಅಥವಾ ಅವರೊಂದಿಗೆ ಚೆನ್ನಾಗಿ ಗುರುತಿಸಿಕೊಂಡರೆ ನನಗೆ ಹತ್ತಿರವಾಗಬಹುದು ಎಂದು ನೀವು ಭಾವಿಸಿದರೆ ಅದನ್ನು ನಿಮ್ಮ ಮನಸಿನಿಂದ ತೆಗೆದು ಹಾಕಿ ನೀವು ಹೀಗೆ ಮಾಡುವುದು ನನಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ.” ಎಂದು ಬರೆದುಕೊಂಡಿದ್ದಾರೆ.
ದಾಸನ ಈ ನಡೆ ಕೆಲ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಆದರೆ ಮತ್ತೆ ಕೆಲವ್ರು ಈ ಇದನ್ನು ತೀವ್ರವಾಗಿ ಖಂಡಿಸಿದ್ದಾರೆ. ಹಾಗ್ ನೋಡಿದ್ರೆ ದರ್ಶನ್ ಹೆಸರು ಹೇಳಿಕೊಂಡೆ ಇಷ್ಟರಲ್ಲಾಗಲೇ ಚಂದ್ರು ಇಂಡಸ್ಟ್ರೀಯಲ್ಲಿ ಆಳ್ವಿಕೆ ಶುರು ಮಾಡಬಹುದಿತ್ತು. ಆದ್ರೆ ಅವರು ಯಾವತ್ತು ಹಾಗೇಯೇ ಮಾಡಿಲ್ಲ. ಇದೆಲ್ಲವೂ ಗೊತ್ತಿದ್ದರೂ ದರ್ಶನ್ ಹೀಗೆ ಮಾಡಬಾರದಿತ್ತು ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.