ಉಚಿತ ಸಾಮೂಹಿಕ ವಿವಾಹಕ್ಕೆ ಸದಾಕಾಲ ದಾನಮ್ಮ ತಾಯಿ ಪ್ರೇರಣೆಯನ್ನು ನೀಡುತ್ತಾಳೆ. ಉಚಿತ ಬಡವರಿಗಾಗಿ ಸಾಮೂಹಿಕ ವಿವಾಹ ನಡೆದಿದ್ದು ಸಮಾಜದಲ್ಲಿ ಒಂದು ಉತ್ತಮ ಕೆಲಸ ಬಡವರಿಗೆ ಈ ಮದುವೆ ಸಾಕಿಯಾಗಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ದಾನಮ್ಮ ದೇವಿ ದೇವಸ್ಥಾನದಲ್ಲಿ ಎರಡು ಜೋಡಿ ಉಚಿತ ಸಾಮೂಹಿಕ ವಿವಾಹ ಗುರು ಹಿರಿಯರ ಸಾಕ್ಷಿಯೊಂದಿಗೆ ವಿವಾಹ ಕಾರ್ಯಕ್ರಮ ನಡೆಯಿತು.
ವರ ದೈವ ಸಾಕ್ಷಿಯಾಗಿ ಹೆಂಡತಿಯನ್ನು ಗೌರವದಿಂದ ಕಾಣಬೇಕು. ವಧು ದೈವ ಸಾಕ್ಷಿಯಾಗಿ ಕೈಹಿಡಿದ ಗಂಡನನ್ನು ಗೌರವದಿಂದ ಕಾಣಿ ಕೊನೆಯದಾಗಿ ಮೋಕ್ಷ ಪಡೆದುಕೊಳ್ಳಬೇಕು ಎಂದು ಹೇಳಿದರು. ಮೋಕ್ಷ ಪಡೆಯುವ ಮುಂಚೆ ವಧು-ವರರು ಧರ್ಮದ ಹಾದಿಯಲ್ಲಿ ನಡಿಯಿರಿ ಧರ್ಮವನ್ನು ಗೌರವಿಸಿ ಧರ್ಮವನ್ನು ಅರಿತುಕೊಳ್ಳಿ ಧರ್ಮವನ್ನು ಗೌರವಿಸಿದರೆ ನಮ್ಮಣ್ಣ ಅದು ನಮ್ಮಣ್ಣ ಗೌರವಿಸುತ್ತದೆ.
ಇಂದು ಉಚಿತವಾಗಿ ವಿವಾಹ ದಾಂಪತ್ಯಕ್ಕೆ ಕಾಲಿರುವ ನವದಂಪತಿಗಳಿಗಳು ನೀವು ಪುಣ್ಯವಂತರು ಹಣ ಖರ್ಚು ಮಾಡಿ ಮದುವೆ ಆದರೆ ಇಷ್ಟು ಸುಂದರ ಆಗಲಿಕ್ಕಿಲ್ಲ ಅಷ್ಟೊಂದು ಗುರು ಹಿರಿಯರ ಪೂಜ್ಯರ ಸಮ್ಮುಖದಲ್ಲಿ ಸಾಕ್ಷಿಯಾಗಿ ಇಂದು ವಿವಾಹವನ್ನು ಆಗಿದಿದ್ದೀರಿ ನೀವು ನಿಜವಾಗಲೂ ಪುಣ್ಯವಂತರು ನಿಮ್ಮ ಜೀವನ ಸುಖಕರವಾಗಲಿ ಎಂದು ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ ಎಂದು ಪರಮಪೂಜ್ಯ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಬ್ರಹ್ಮಾನಂದ ಮಠ ಹೇಳಿದರು.
ಇದೇ ಸಂದರ್ಭದಲ್ಲಿ ದಾನಮ್ಮ ದೇವಿ ಟ್ರಸ್ಟಿನ ಅಧ್ಯಕ್ಷರಾದ ಶಿವಜಾತ ಉಮದಿ. ದರೆಪ್ಪ ಉಳ್ಳಾಗಡ್ಡಿ. ಉದಯ ಜಿಗಜಿನ್ನಿ. ಸಂಜಯ ತೇಲಿ. ಸೋಮಶೇಖರ ಕೋರಟೆಶೆಟ್ಟಿ. ನಾರಾಯಣ ಬೋರಗಿನಾಯಕ. ಡಾ. ರವಿ ಜಮಖಂಡಿ. ರವಿ ಗಡಾದ. ಪ್ರವೀಣ ಹಜಾರೆ. ನೀಲಕಂಠ ಮುತ್ತೂರ. ಚಿದಾನಂದ ಗಾಳಿ. ಈಶ್ವರ ನಾಗರಾಳ. ಈರಣ್ಣ ಗುಣಕಿ. ಈಶ್ವರ ಮಿರ್ಜಿ. ಇಂದ್ರು ಲಾಳಕೆ. ಪ್ರೊ ಎಮ್ ಎಸ್ ಬದಾಮಿ. ಶಿವಾನಂದ ದಾಶ್ಯಾಳ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ