ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಹೃದಯಾಘಾತದಿಂದ ಸಾವನಪ್ಪಿದ್ದು, ಈ ಸಾವಿಗೆ ಬಿಜೆಪಿ ಶಾಸಕರೇ ಕಾರಣ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಆರೋಪಿಸಿದರು.
Be Alert: ಬೆಂಗಳೂರಲ್ಲಿ ಕೆಲಸ ಅರಸೋ ಯುವಕ ಯುವತಿಯರೇ ಎಚ್ಚರ: ಮೋಸದ ಜಾಲ ಪತ್ತೆ ಹಚ್ಚಿದ್ದೇ ರೋಚಕ!
ಈ ಕುರಿತು ಬೆಂಗಳೂರಿನಲ್ಲಿ ಮಾದ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಬಿಬಿಎಂಪಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಸಾವಿಗೆ ಹಿಂದಿನ ಬಿಜೆಪಿ ಸರ್ಕಾರದ ಶಾಸಕರು ಹಾಗೂ ಸರ್ಕಾರದ ಅಧಿಕಾರಿಗಳೇ ಕಾರಣ, ಮಾನಸಿಕ ಟಾರ್ಚರ್ನಿಂದ ಅಂಬಿಕಾಪತಿ ಅವರಿಗೆ ನೋವಾಗಿತ್ತು. ಇತ್ತೀಚೆಗೆ ಆದ ಕೆಲ ಘಟನೆಗಳಿಂದ ಬಹಳ ನೊಂದಿದ್ದರು ಎಂದರು.
ಕಳೆದ ಸರ್ಕಾರದ ಸಚಿವರೊಬ್ಬರು ಹಾಗೂ ಈಗಿನ ಸರ್ಕಾರದ ಕೆಲ ಅಧಿಕಾರಿಗಳು ಇವರ ಸಾವಿಗೆ ಕಾರಣ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.