ರೇಣುಕಾಸ್ವಾಮಿ ಕೊಲೆಯಾಗಿ ಇಂದಿಗೆ ಸರಿಯಾಗಿ 3 ತಿಂಗಳು ಆಗಿದೆ.ಪೊಲೀಸರು ಚಾರ್ಜ್ ಶೀಟ್ ಅನ್ನೂ ಸಲ್ಲಿಸಿದ್ದಾರೆ. ಈ ಮಧ್ಯೆ ಚಾರ್ಜ್ ಶೀಟ್ ನಲ್ಲಿನ ಅಂಶಗಳು ನಿಜಕ್ಕೂ ಬೆಚ್ಚಿ ಬೀಳಿಸುತ್ತಿವೆ. ಒಂದೊಂದು ಗಾಯದ ಹಿಂದೆ ಒಂದೊಂದು ಸ್ಟೋರಿ ಬರ್ತಿದೆ.ಡಿ ಗ್ಯಾಂಗ್ ನ್ಯಾಯಾಂಗ ಬಂಧನ ನಾಳೆಗೆ ಅಂತ್ಯವಾಗಲಿದ್ದು ಜಾಮೀನು ಮೊರೆ ಹೋಗೋ ಸಾದ್ಯತೆ ಇದೆ.ಹಾಗಾದ್ರೆ ಡಿ ಗ್ಯಾಂಗ್ ಗೆ ಜಾಮೀನ್ ಸಿಗುತ್ತಾ?ಇದೀಗ ರಿವೀಲ್ ಆಗಿರೋ ಚಾರ್ಜ್ ಶೀಟ್ ನ ಕಥೆಗಳೇನು ಅನ್ನೋದನ್ನ ತೋರಿಸ್ತೀವಿ ನೋಡಿ..
ರೇಣುಕಾಸ್ವಾಮಿಯನ್ನು ದರ್ಶನ್ & ಗ್ಯಾಂಗ್ ಭೀಕರವಾಗಿ ಹತ್ಯೆ ಮಾಡಿ ಇಂದಿಗೆ 3 ತಿಂಗಳು ಕಳೆದಿದೆ.ಇದೀಗ ಜೈಲುಗಳಲ್ಲಿ ಕಂಬಿ ಎಣಿಸುತ್ತಿರುವ ಡಿ ಗ್ಯಾಂಗ್ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಿರೊದ್ರಿಂದ ದರ್ಶನ್ ಸೇರಿ ಇನ್ನೂ ಹಲವರು ನಾಳೆ ಯೇ ಜಾಮಿನಿಗಾಗಿ ಅರ್ಜಿ ಸಲ್ಲಿಸೋಕೆ ರೆಡಿಯಾಗಿದ್ದಾರೆ. ಈಗಾಗಲೇ ಪವಿತ್ರಾ ಇನ್ನಿತರರು ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿ ವಜಾ ಆಗಿತ್ತು. ನಾಳೆಗೆ ಆರೋಪಿಗಳ ನ್ಯಾಯಾಂಗ ಬಂಧನ ಮುಕ್ತಾಯವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ.
Gowri Bagina: ಗೌರಿ ಬಾಗಿನದಲ್ಲಿ ಇರಲೇಬೇಕಾದ ವಸ್ತುಗಳ ಬಗ್ಗೆ ಗೊತ್ತೇ..? ಇಲ್ಲಿದೆ ನೋಡಿ
ದರ್ಶನ್ ನಾಳೆ ಜಾಮೀನು ಅರ್ಜಿ ಸಲ್ಲಿಸಿದರೂ ಸಹ ಜಾಮೀನು ಸಿಗುವುದು ಬಹಳ ಕಷ್ಟ ಎನ್ನಲಾಗುತ್ತಿದೆ. ನಾಳೆ ಆರೋಪ ಪಟ್ಟಿಯನ್ನು ಆರೋಪಿ ಪರ ವಕೀಲರಿಗೆ ನೀಡಲಾಗುತ್ತೆ. ಅದಾದ ಒಂದು ವಾರದ ಬಳಿಕ ವಿಚಾರಣೆಗಳು ಆರಂಭವಾಗುವ ಸಾಧ್ಯತೆ ಇದೆ. ಆದರೆ ದರ್ಶನ್, ಪ್ರಭಾವಿ ವ್ಯಕ್ತಿ ಆಗಿದ್ದು, ಜೈಲಿನಲ್ಲಿದ್ದಾಗಲೂ ಪ್ರಭಾವವನ್ನು ಬಳಸಿರುವುದಕ್ಕೆ ಸಾಕ್ಷ್ಯ ಸಿಕ್ಕರುವ ಕಾರಣ ದರ್ಶನ್ಗೆ ಜಾಮೀನು ಸಿಗುವುದು ಸುಲಭವಾಗಿರದು ಎನ್ನಲಾಗುತ್ತಿದೆ.ಜೊತೆಗೆ ಇನ್ನೂ ಸಿ ಎಫ್ ಎಸ್ ಎಲ್ ರಿಪೋರ್ಟ್ ಗಳು ಬರೋದು ಬಾಕಿ ಇರೋದ್ರಿಂದ ನ್ಯಾಯಾಲಯ ಜಾಮೀನು ನೀಡೋದು ಡೌಟು ಎನ್ನಲಾಗುತ್ತಿದೆ.