Breaking News: ಬೆಂಗಳೂರಿನಲ್ಲಿ ಸಿಲಿಂಡರ್​ ಸ್ಫೋಟ: 7 ಮಂದಿಗೆ ಗಾಯ

ಬೆಂಗಳೂರಿನಲ್ಲಿ  ಸಿಲಿಂಡರ್​ ಸ್ಫೋಟಗೊಂಡು ಐವರಿಗೆ ಗಾಯಗಳಾಗಿವೆ. ವೀವರ್ಸ್ ಕಾಲೋನಿ ಬಳಿಯ ಮಾರುತಿ ಬಡಾವಣೆಯಲ್ಲಿ ನಡೆದಿದೆ. ಉತ್ತರ ಪ್ರದೇಶದ ವಾರಾಣಸಿ ಮೂಲದ ಜಮಾಲ್, ನಾಜಿಯಾ, ಇರ್ಫಾನ್, ಗುಲಾಬ್, ಶಹಜಾದ್​ಗೆ ಸಿಲಿಂಡರ್​ ಸ್ಫೋಟದಿಂದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಜಾನೆ 5.30ರ ಸುಮಾರಿಗೆ ಸಿಲಿಂಡರ್​ ಸೋರಿಕೆಯಾಗಿ ಸ್ಫೋಟವಾಗಿದೆ. ಸಿಲಿಂಡರ್ ಸ್ಫೋಟಗೊಂಡ ತೀವ್ರತೆಗೆ ಮನೆಯ ಕಿಟಕಿಗಳು ಛಿದ್ರವಾಗಿವೆ.