ಬಿಗ್ ಬಾಸ್ (Bigg Boss Kannada 10) ಈಗ ಟಿಆರ್ಪಿಯಲ್ಲಿ ನಂಬರ್ ಒನ್ ಆಗಿ ಮುನ್ನುಗ್ಗುತ್ತಿದೆ. ದೊಡ್ಮನೆ ಆಟಕ್ಕೆ ಜನ ಕೂಡ ಸೈ ಎಂದು ಚಪ್ಪಾಳೆ ಹೊಡೆಯುತ್ತಿದ್ದಾರೆ. ಹೀಗಿರುವಾಗ ಬಿಗ್ ಬಾಸ್ನ ಸೆಂಟರ್ ಆಫ್ ಅಟ್ರಾಕ್ಷನ್ ಸಂಗೀತಾ- ಕಾರ್ತಿಕ್ (Karthik Mahesh) ಜೋಡಿ ಲವ್ವಿ ಡವ್ವಿ ಕೂಡ ಸಖತ್ ಮೋಡಿ ಮಾಡ್ತಿದೆ. ಇದೀಗ ಸಂಗೀತಾಗೆ ಕ್ಯಾಪ್ಟನ್ ಕಾರ್ತಿಕ್ ಕ್ಯೂಟ್ ಆಗಿರೋ ಶಿಕ್ಷೆಯೊಂದನ್ನ ಕೊಟ್ಟಿದ್ದಾರೆ. ಕಾರ್ತಿಕ್ಗೆ ಲವ್ ಯೂ ಅಂತ ಹೇಳೋದೇ ಸಂಗೀತಾ ಶಿಕ್ಷೆಯಾಗಿದೆ.
ದೊಡ್ಮನೆಯ ಲವ್ ಬರ್ಡ್ಸ್ ಸಂಗೀತಾ- ಕಾರ್ತಿಕ್ ಸದಾ ಒಂದಲ್ಲಾ ಒಂದು ವಿಚಾರವಾಗಿ ಹೈಲೆಟ್ ಆಗುತ್ತಲೇ ಇರುತ್ತಾರೆ. ಕಳೆದ ಮೂರು ದಿನಗಳಿಂದ ಕಾರ್ತಿಕ್, ಸಂಗೀತಾ, ತನಿಷಾ ನಡುವೆ ಹೈವೋಲ್ಟೇಜ್ ಜಗಳದ ನಂತರ ಕಾರ್ತಿಕ್-ಸಂಗೀತಾ ನಡುವೆ ಕ್ಯೂಟ್ ಪ್ರಪೋಸಲ್ ನಡೆದಿದೆ. ಹೇಗೆ ಅಂತೀರಾ. ಇಲ್ಲಿದೆ ಮಾಹಿತಿ.
ನಿನ್ನೆ ಎಪಿಸೋಡ್ನಲ್ಲಿ ತುಕಾಲಿ ಸಂತೂ 3 ಬಾರಿ ಮೈಕ್ ಹಾಕೋದನ್ನ ಮರೆತಿದ್ದಾರೆ. ಅದಕ್ಕೆ ಬಿಗ್ ಬಾಸ್ ಕೂಡ ಆದೇಶಿಸಿ, ತುಕಾಲಿ ನಿಮ್ಮ ಮೈಕ್ನ ಸರಿಯಾಗಿ ಧರಿಸಿ ಎಂದು ಆರ್ಡರ್ ಮಾಡಿದ್ದಾರೆ. ಇದನ್ನ ಕೇಳಿರೋ ಕ್ಯಾಪ್ಟನ್ ಕಾರ್ತಿಕ್ ತುಕಾಲಿಗೆ ಶಿಕ್ಷೆಯೊಂದನ್ನ ನೀಡಿದ್ದಾರೆ. ನೀವೂ ಎಲ್ಲಿ ಹೇಗೆ ನಡೆಯಿರಿ, ಹೆಜ್ಜೆ ನಮಸ್ಕಾರ ಹಾಕಿಯೇ ನಡೆಯಬೇಕು ಎಂದು ಕ್ಯಾಪ್ಟನ್ ಕಾರ್ತಿಕ್ ಆದೇಶ ನೀಡಿದ್ದರು.