ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪ ಹೊತ್ತು ಜೈಲು ಸೇರಿದ್ದ ದರ್ಶನ್ ಜಾಮೀನಿ ಮೇಲೆ ಹೊರಬಂದು ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಕೆಲ ದಿನಗಳು ಮೈಸೂರಿನಲ್ಲಿ ಡೆವಿಲ್ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಡೆವಿಲ್ ಶೂಟಿಂಗ್ ಮುಕ್ತಾಯಗೊಂಡಿದೆ. ಮೈಸೂರಿನಿಂದ ಪ್ಯಾಕಪ್ ಮಾಡಿರುವ ಚಿತ್ರತಂಡ ಸದ್ಯ ಮುಂದಿನ ಹಂತದ ಚಿತ್ರೀಕರಣಕ್ಕೆ ರಾಜಸ್ಥಾನಕ್ಕೆ ತೆರಳಲಿದೆ.
ಡೆವಿಲ್ ಸಿನಿಮಾದಲ್ಲಿ ನಟಿ ಶರ್ಮಿಳಾ ಮಾಂಡ್ರೆ ಅಭಿನಯಿಸುತ್ತಿದ್ದು, ನಿನ್ನೆ ಅಪ್ಪು ಸಿನಿಮಾ ನೋಡಿದಿಕ್ಕೆ ರಮ್ಯಾ ಜೊತೆ ಆಗಮಿಸಿದ್ದರು. ಈ ವೇಳೆ ಡೆವಿಲ್ ಚಿತ್ರದ ಬಗ್ಗೆ ಅವರು ಕ್ರೇಜಿ ಅಪ್ ಡೇಟ್ ಕೊಟ್ಟಿದ್ದಾರೆ. “ಡೆವಿಲ್ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಈಗಾಗಲೇ ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದೇವೆ. ಏಪ್ರಿಲ್ನಲ್ಲಿ ರಾಜಸ್ಥಾನದಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ. ನನ್ನ ಪಾತ್ರದ ಶೂಟಿಂಗ್ 20% ಆಗಿದೆ. ಇನ್ನೂ 80% ಬಾಕಿ ಉಳಿದಿದೆ ಎಂದಿದ್ದಾರೆ. ಈ ವೇಳೆ, ಸೆಟ್ನಲ್ಲಿ ದರ್ಶನ್ರನ್ನು ಭೇಟಿಯಾಗಿರೋದಾಗಿ ಶರ್ಮಿಳಾ” ತಿಳಿಸಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಶರ್ಮಿಳಾ ಮಾಂಡ್ರೆ ಈ ಹಿಂದೆ ನವಗ್ರಹ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಇದೀಗ ಮತ್ತೊಮ್ಮೆ ಇವರಿಬ್ಬರು ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿಲನಾ ಪ್ರಕಾಶ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಡೆವಿಲ್ ಸಿನಿಮಾದಲ್ಲಿ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಖಳನಾಯಕನಾಗಿ ನಟಿಸುತ್ತಿದ್ದಾರೆ. ಈ ಹಿಂದೆ ದರ್ಶನ್ ನಟನೆಯ ‘ತಾರಕ್’ ಚಿತ್ರಕ್ಕೆ ಪ್ರಕಾಶ್ ಆಕ್ಷನ್ ಕಟ್ ಹೇಳಿದ್ದರು. ಬಳಿಕ ಈ ಚಿತ್ರವನ್ನು ಅವರು ಕೈಗೆತ್ತಿಕೊಂಡಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಬಹಳ ನಿರೀಕ್ಷೆ ಹುಟ್ಟುಹಾಕಿದ್ದು, ಡೆವಿಲ್ ನಲ್ಲಿ ದಚ್ಚು ಗಾಗಿ ಬಹಳ ವಿಭಿನ್ನವಾದ ಪಾತ್ರವನ್ನು ಡಿಸೈನ್ ಮಾಡಿದ್ದಾರೆ. ಈಗಾಗಲೇ ಟೀಸರ್ನಲ್ಲಿ ಅದು ಗೊತ್ತಾಗುತ್ತಿದೆ.