ದಾಸರಹಳ್ಳಿ ಕ್ಷೇತ್ರದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಪರಿಹಾರ ಧನದ ಚೆಕ್ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶಾಸಕ ಆರ್. ಮಂಜುನಾಥ್ ಮೊದಲ ಹಂತವಾಗಿ 182 ಜನರಿಗೆ 1ಲಕ್ಷ ರೂ ಗಳ ಪರಿಹಾರ ಚೆಕ್ ವಿತರಿಸಿದರು. ಈ ವೇಳೆ ಮಾತನಾಡಿದ ಅವರು ಪ್ರತಿಯೊಬ್ಬರ ಜೀವವೂ ಅಮೂಲ್ಯವಾಗಿರುವುದರಿಂದ, ಕ್ಷೇತ್ರದ ಜನತೆ ಕೊವಿಡ್ ಲಸಿಕೆಯನ್ನು ಪಡೆದು, ಅಗತ್ಯ ಮುನ್ನೆಚ್ಚರಿಕಾ ನಿಯಮಗಳನ್ನು ಅನುಸರಿಸುವ ಮೂಲಕ ಸುರಕ್ಷಿತವಾಗಿ ಇರಬೇಕು ಎಂದು ಬೆಂಗಳೂರಿನ ಜೆಡಿಎಸ್ ಶಾಸಕ ಆಗಿರುವ ಆರ್. ಮಂಜುನಾಥ್ ತಿಳಿಸಿದರು. ಇನ್ನು ಕೊವಿಡ್ ಸೋಂಕು ಅತಿ ಕಡಿಮೆ ಅವಧಿಯಲ್ಲಿ ವೇಗವಾಗಿ ಹರಡುವ ಮೂಲಕ, ಜನತೆಗೆ ಆತಂಕ ಸೃಷ್ಟಿಸಿದ್ದು, ಕ್ಷೇತ್ರದ ಜನತೆ ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸುವ ಮೂಲಕ ಧೈರ್ಯದಿಂದ ಇರಬೇಕು ಎಂದು ಹೇಳಿದರು.
