ಬೆಂಗಳೂರು: ಉತ್ತರದ ಹದಿನಾಲ್ಕು ಕ್ಷೇತ್ರಗಳ ಮತದಾನಕ್ಕೆ ಕೌಂಟ್ಡೌನ್ ಶುರುವಾಗಿದೆ. ರಾಜ್ಯ ರಾಜಧಾನಿಯಿಂದ ವೋಟ್ ಹಾಕಲು ಊರುಗಳತ್ತ ಜನರು ತೆರಳಿದ್ದಾರೆ. ರೈಲು-ಬಸ್ಗಳ ಮೂಲಕ ಮನೆ ಕಡೆ ಹೊರಟಿದ್ದಾರೆ. ಜನರ ಅನುಕೂಲಕ್ಕೆ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಹೆಚ್ಚುವರಿ ಬಸ್ ನಿಯೋಜಿಸಿದ್ರೆ , ನೈರುತ್ಯ ರೇಲ್ವೆ ವಿಶೇಷ ಟ್ರೈನ್ ಬಿಟ್ಟಿದೆ. ಇದರ ನಡುವೆ ಖಾಸಗಿ ಬಸ್ ಗೂ ಡಿಮ್ಯಾಂಡ್ ಶುರುವಾಗಿದೆ.
ಉತ್ತರದ ಹದಿನಾಲ್ಕು ಕ್ಷೇತ್ರಗಳ ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿಯಿದೆ. ಹಕ್ಕು ಚಲಾವಣೆಗೆ ಸಿಲಿಕಾನ್ ಸಿಟಿಯಿಂದ ಊರುಗಳತ್ತ ಜನರು ಪ್ರಯಾಣ ಬೆಳೆಸ್ತಿದ್ದಾರೆ. ಬಸ್, ರೈಲಗಳ ಮೂಲಕ ಪ್ರಯಾಣ ಮಾಡ್ತಿದ್ದಾರೆ. ಕೆಎಸ್ಆರ್ಟಿಸಿ ಹೆಚ್ಚುವರಿ ಬಸ್ ನಿಯೋಜಿಸಿದ್ರೆ. ನೈರುತ್ಯಾ ರೇಲ್ವೆ ಎಕ್ಸ್ಟ್ರಾ ಟ್ರೈನ್ ಬಿಟ್ಟಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಇವತ್ತು ಬೆಳಿಗ್ಗೆಯಿಂದಲೇ ಜನರು ಊರುಗಳತ್ತ ತೆರಳುತ್ತಿದ್ದಾರೆ.
ಬೆಳಗಾವಿ, ಬಾಗಲಕೋಟೆ, ಬೀದರ್, ರಾಯಚೂರು, ಕೊಪ್ಪಳ ಶಿವಮೊಗ್ಗ ಸೇರಿ ಮತದಾನ ನಡೆಯುವ ಜಿಲ್ಲೆಗಳತ್ತ ಹೋಗ್ತಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿ ಹೆಚ್ಚುವರಿ 500 ಬಸ್ ನಿಯೋಜಿಸಿದೆ. ಅತ್ತ ಬಿಎಂಟಿಸಿ ಕೂಡ ಉತ್ತರದ ಭಾಗಕ್ಕೆ ಹೆಚ್ಚುವರಿ ನೂರಕ್ಕು ಹೆಚ್ಚು ಬಸ್ ಬಿಟ್ಟಿದೆ. ಬಸ್ ಮಾತ್ರವಲ್ಲದೇ ಟ್ರೈನ್ಗಳ ಮೂಲಕವೂ ಜನರು ತಮ್ಮೂರಿನತ್ತ ತೆರಳುತ್ತಿದ್ದಾರೆ. ಹೀಗಾಗಿ ಜನರ ಅನಕೂಲಕ್ಕೆ ನೈರುತ್ಯ ರೇಲ್ವೆ ಕೂಡ ಇವತ್ತು ಹೆಚ್ಚುವರಿ 5ಕ್ಕೆ ಹೆಚ್ಚು ವಿಶೇಷ ಟ್ರೈನ್ಗಳನ್ನ ಬಿಟ್ಟಿದೆ.
ಇದರ ನಡುವೆ ಖಾಸಗಿ ಬಸ್ ಗೂ ಡಿಮ್ಯಾಂಡ್ ಶುರುವಾಗಿದೆ. ಜನರಿಂದ ಬೇಡಿಕೆ ಹೆಚ್ಚಿದೆ ಬೆನ್ನಲ್ಲೇ ಖಾಸಗಿ ಬಸ್ ಮಾಲೀಕರು ಹೆಚ್ಚುವರಿ ಬಸ್ ಬಿಟ್ಟಿದ್ದಾರೆ. 14 ಜಿಲ್ಲೆಗಳಿಗೆ ಸುಮಾರು 1500 ಕ್ಕೂ ಅಧಿಕ ಖಾಸಗಿ ಬಸ್ಗಳು ತೆರಳ್ತಿವೆ.
ಖಾಸಗಿ ಬಸ್ಗೆ ಡಿಮ್ಯಾಂಡ್
- ಬೆಂಗಳೂರು-ಹುಬ್ಬಳ್ಳಿ 179 ಬಸ್
- ಬೆಂಗಳೂರು-ದಾರವಾಡ 156 ಬಸ್
- ಬೆಂಗಳೂರು -ಬೆಳಗಾವಿ 126 ಬಸ್
- ಬೆಂಗಳೂರು-ದಾವಣಗೆರೆ 103 ಬಸ್
- ಬೆಂಗಳೂರು-ರಾಯಚೂರು 50 ಬಸ್
- ಬೆಂಗಳೂರು-ಬಳ್ಳಾರಿ 45 ಬಸ್
- ಬೆಂಗಳೂರು- ಶಿವಮೊಗ್ಗ 56 ಬಸ್7. ಬೆಂಗಳೂರು-ಕಾರವಾರ 50 ಬಸ್
ಸಾಲು ಸಾಲು ರಜೆ ಬಂದಾಗ, ಜನರ ಡಿಮ್ಯಾಂಡ್ ಹೆಚ್ಚಾಗ ಬಸ್ ದರ ಹೆಚ್ಚಾಳ ಮಾಡ್ತಿದ್ದ ಖಾಸಗಿ ಬಸ್ ಮಾಲೀಕರು, ಇವತ್ತು ಮಾತ್ರ ಬಸ್ ದರ ಏರಿಕೆ ಮಾಡಿದೇ ಹೆಚ್ಚಿನ ವೋಟ್ ಆಗ್ಲಿ ಅಂತ ಬೆಂಬಲಿಸ್ತಿದ್ದಾರೆ. ಒಟ್ಟಾರೆ ಸಿಲಿಕಾನ್ ಸಿಟಿಯಿಂದ ಮತ ಚಲಾವಣೆಗೆ ಜನರು ಊರಿಗೆ ತೆರಳುತ್ತಿದ್ದಾರೆ. ಬಸ್, ಟ್ರೈನ್ ಹಿಡಿದು ಊರು ಸೇರ್ತಿದ್ದಾರೆ. ಕೆಲವರು ಬಸ್ ಸಿಗದೇ ಪರದಾಟಿದ್ರು.