ಮೈಸೂರು:– ನಾಡಹಬ್ಬ ದಸರಾಗೆ ದಿನಗಣನೆ ಆರಂಭವಾಗಿದ್ದು, ಅಕ್ಟೋಬರ್ 3 ರಂದು ಮೈಸೂರು ದಸರಾಕ್ಕೆ ಚಾಲನೆ ಸಿಗಲಿದೆ. ದಸರಾ ಸಮೀಪಿಸುತ್ತಿದ್ದಂತೆ ಅರಮನೆಯಲ್ಲಿ ದಸರಾ ಸಿದ್ದತೆಗಳು ಬರದಿಂದ ಸಾಗಿದೆ.
BBK11: ಬಿಗ್ ಬಾಸ್ ಮನೆಗೆ ಕಾಲಿಟ್ಟ ತುಕಾಲಿ ಹೆಂಡ್ತಿ: ಮಾನಸ ಕಾಲಿಟ್ಟಿದ್ದು ಸ್ವರ್ಗಕ್ಕಾ!? ನರಕಕ್ಕಾ!?
ಈ ನಡುವೆ ಪ್ರತಿ ವರ್ಷದಂತೆ ಈ ಬಾರಿ ಕೂಡ ದಸರಾ ಉತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾದೇವಿಗೆ ಗೌರವಧನ ನೀಡಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್ಸಿ ಮಹದೇವಪ್ಪ ಅವರು ಆಹ್ವಾನ ನೀಡಿದ್ದಾರೆ.
ಹೌದು, ದಸರಾ ಸಮೀಪಿಸುತ್ತಿದ್ದಂತೆ ಅರಮನೆಯಲ್ಲಿ ಅಳವಡಿಸಿರುವ ದೀಪಗಳಲ್ಲಿ ಕೆಟ್ಟುಹೋಗಿರುವ ವಿದ್ಯುತ್ ದೀಪಾಗಳನ್ನು ಬದಲಾಯಿಸುವ ಕಾರ್ಯ ಬರದಿಂದ ಸಾಗಿದೆ. ಇಡೀ ಅರಮನೆಯನ್ನ ಒಂದು ಲಕ್ಷ ವಿದ್ಯುತ್ ದೀಪಾಗಳಿಂದ ಅಲಂಕರಿಸಲಾಗಿದೆ.
ಇನ್ನು ಇದೇ ರೀತಿ ಅರಮನೆಗೆ ಸುಣ್ಣ ಬಣ್ಣ ಬಳಿಯುವ ಕೆಲಸವನ್ನು ಮಾಡಲಾಗುತ್ತಿದೆ. ಸದ್ಯ ಹಬ್ಬದ ಸಂಧರ್ಭದಲ್ಲಿ ಮನೆಗಳಿಗೆ ಹೇಗೆ ಸುಣ್ಣ ಬಣ್ಣ ಬಳಿಯುತ್ತೇವೆ ಅದೇ ಮಾದರಿಯಲ್ಲಿ ಇಡೀ ಅರಮನೆಯ ಪ್ರಾಂಗಣದಲ್ಲಿ ಬಣ್ಣ ಬಳಿಯಲಾಗುತ್ತಿದೆ. ಅದೇ ರೀತಿ ಅರಮನೆ ಆವರಣವನ್ನ ವಿವಿಧ ಹೂಗಳಿಂದ ಅಲಂಕರಿಸಲಾಗುತ್ತೆ. ಸುಮಾರು 15 ಕ್ಕು ಹೆಚ್ಚು ಜಾತಿಯ 10 ಸಾವಿರಕ್ಕು ಹೆಚ್ಚು ಹೂಕುಂಡಗಳಿಂದ ಅಲಂಕರಿಸಲಾಗುತ್ತಿದೆ.
ಒಟ್ಟಾರೆ, ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದ್ದು, ಇದಕ್ಕಾಗಿ ಅರಮನೆ ಆಡಳಿತ ಮಂಡಳಿ ಬರದಿಂದ ಸಿದ್ದತೆ ಮಾಡಿಕೊಳ್ಳುತ್ತಿದೆ.