ಬೆಂಗಳೂರು: ಕೆರೆಯೇ ಇಲ್ಲದೆ ಕೆರೆಯ ಬಫರ್ ಝೋನ್ ಎಂದು ಹೇಳುತ್ತಿರುವ ನಿಯಮಗಳ ಕುರಿತು ವಿಧಾನ ಪರಿಷತ್ ಶಾಸಕರಾದ ಟಿ.ಎ.ಶರವಣ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪ್ರಶ್ನಿಸಿದ್ದಾರೆ. ವಿಧಾನಸಭೆ ಕಲಾಪದಲ್ಲಿಂದು ಮಾತನಾಡಿದ ಅವರು, ದಶಕಗಳ ಹಿಂದೆಯೇ ಬೆಂಗಳೂರಿನ ಅನೇಕ ಕೆರೆಗಳು ಒತ್ತುವರಿಯಾಗಿ ಅಭಿವೃದ್ಧಿಯಾಗಿದೆ.
Diabetic patients: ಮಧುಮೇಹ ಇರುವವರು ಬ್ಲ್ಯಾಕ್ʼಬೆರಿ ತಿಂದರೆ ಏನಾಗುತ್ತದೆ ಗೊತ್ತಾ..?
ಆದರೆ ಅದರ ಪಕ್ಕದ ಪ್ರದೇಶಗಳನ್ನು ಕೆರೆ ಬಫರ್ ಝೋನ್ ಎಂದು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿರುವ ವಿಚಾರ ಸರ್ಕಾರದ ಗಮನಕ್ಕೆ ಬಂದಿದೆಯೇ? ಕೆರೆಯೇ ಇಲ್ಲದ ಮೇಲೆ ಬಫರ್ ಝೋನ್ ಎಂದು ಅನುಮತಿ ನಿರಾಕರಿಸಲು ಕಾರಣಗಳೇನು?
1990ರಿಂದ ಇಲ್ಲಿಯವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಿಡಿಸಿ ಪರಿಷ್ಕರಣೆ ಆಗಿದೆಯೇ? ಎನ್ನುವ ಬಗ್ಗೆ ವಿಧಾನ ಪರಿಷತ್ ಶಾಸಕ ಟಿ.ಎ.ಶರವಣ ಅವರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕಂದಾಯ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.