ಬೆಂಗಳೂರು: ವಿದೇಶದಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣನಕ್ಕೆ ಬಂದ 7 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬ್ರಿಟನ್ನಿಂದ ಬಂದ ಮೂವರಿಗೆ, ಅಮೆರಿಕಾದಿಂದ ಬಂದ ಇಬ್ಬರಿಗೆ ಮತ್ತು ಐರ್ಲೆಂಡ್ ಮೂಲದ 1 ಹಾಗೂ ಕತಾರ್ ಏರ್ವೇಸ್ ನಿಂದ ಆಗಮಿಸಿದ ಟಾಂಜಾನಿಯಾ ಮೂಲದ ಒಬ್ಬ ಪ್ರಯಾಣಿಕನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಸೋಂಕಿತರನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಸೋಂಕಿತರ ಜೊತೆಯಲ್ಲಿ ಬಂದವರ ವಿಳಾಸ ಮತ್ತು ಮೊಬೈಲ್ ನಂಬರ್ ಪಡೆದು ಹೋಂ ಕ್ವಾರಂಟೈನ್ ಗೆ ಸೂಚನೆ ನೀಡಲಾಗಿದೆ. ಅಲ್ಲದೆ ಸೋಂಕಿತ ಗಂಟಲು ದ್ರವವನ್ನು ಜಿನೋಮ್ ಸೀಕ್ವೆನ್ಸಿಂಗ್ ಗೆ ಕಳಿಸಲಾಗಿದೆ ಅಂತಾ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದಾರೆ.
