ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಓಮಿಕ್ರಾನ್ ಭೀತಿ ನಡುವೆ ಇಂದು ವಿದೇಶದಿಂದ ಬೆಂಗಳೂರಿಗೆ ಬಂದ 20 ಮಂದಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ವಿದೇಶದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರ್ಟಿಸಿಪಿಆರ್ ಟೆಸ್ಟ್ ವೇಳೆ ಸೋಂಕು ತಗುಲಿರುವುದು ಪತ್ತೆ ಆಗಿದೆ. ಪ್ಯಾರಿಸ್ ನಿಂದ ಆಗಮಿಸಿದ 7 ಪ್ರಾಯಾಣಿಕರಲ್ಲಿ,
ಲಂಡನ್ ನಿಂದ ಆಗಮಿಸಿದ 5 ಪ್ರಯಾಣಿಕರಿಗೆ ಹಾಗೂ ಇನ್ನಿತರ ವಿದೇಶದ ಪ್ರಯಾಣಿಕರಿಗೆ ಸೋಂಕು ಪತ್ತೆಯಾಗಿದೆ. ಸದ್ಯ ಸೋಂಕು ಕಾಣಿಸಿಕೊಂಡ ಹಿನ್ನೆಲೆ, ಸೋಂಕಿತರನ್ನು ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಇನ್ನೂ ಹೈರಿಸ್ಕ್ ದೇಶಗಳಿಂದ ಬರುವ ಪ್ರಯಾಣಿ ಕರಲ್ಲಿ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿದ್ದು, ಆರೋಗ್ಯ ಇಲಾಖೆ & ಬಿಬಿಎಂಪಿ ಹೆಚ್ಚಿನ ನಿಗಾ ವಹಿಸಿದೆ ಎಂದು ಹೇಳಲಾಗಿದೆ.
