ಬೆಂಗಳೂರು : ಬೆಂಗಳೂರು ನಗರದಲ್ಲಿ ಮತ್ತೆ ಕೊರೊನಾ ಸ್ಪೋಟವಾಗಿದ್ದು, ನಿನ್ನೆ ಒಂದೇ ದಿನ ನಗರದಲ್ಲಿ 200 ಕ್ಕೂ ಹೆಚ್ಚು ಪ್ರಕರಣ ಗಳು ಪತ್ತೆ ಆಗಿದೆ. ನಗರದಲ್ಲಿ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 6 ಸಾವಿರದ ಗಡಿ ದಾಟಿದ್ದು, ಮೃತರ ಸಂಖ್ಯೆ 16386 ಕ್ಕೆ ಏರಿಕೆಯಾಗಿದೆ.ಬೆಳ್ಳಂದೂರು ವಾರ್ಡ್ ನಲ್ಲಿ 10, ಗೊಟ್ಟಿಗೆರೆ ವಾರ್ಡ್ 5,
ಹಗದೂರು, ಎಚ್ ಎಸ್ ಆರ್ ಲೇಔಟ್, ಬೇಗೂರು, ಉತ್ತರ ಹಳ್ಳಿ, ವಾರ್ಡ್ ಗಳಲ್ಲಿ ತಲಾ 4, ಸಿಂಗಸಂದ್ರ, ನ್ಯೂ ತಿಪ್ಪಸಂದ್ರ, ಹೊರಮಾವು ವಾರ್ಡ್ ನಲ್ಲಿ ತಲಾ 3 ಪ್ರಕರಣಗಳು ಕಾಣಿಸಿಕೊಂಡಿವೆ ಹೀಗಾಗಿ ಬಿಬಿಎಂಪಿ & ಆರೋಗ್ಯ ಅಧಿಕಾರಿಗಳು ಸೋಂಕಿನ ಸಂಬಂಧ ಹೆಚ್ಚಿನ ನಿಗಾ ವಹಿಸಿದ್ದಾರೆ ಎಂದು ಹೇಳಲಾಗಿದೆ.
