ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 3ನೇ ಅಲೆ ಹೆಚ್ಚಾಗುತ್ತಿರುವ ಹೊತ್ತಲ್ಲೇ ಮತ್ತೆ ಒಮಿಕ್ರಾನ್ ಸದ್ದು ಮಾಡಿದೆ. ಕೋವಿಡ್-19 ನ ರೂಪಾಂತರಿ ವೈರಸ್ ಹೊಸದಾಗಿ 146 ಜನರಲ್ಲಿ ಕಾಣಿಸಿಕೊಂಡಿದೆ. ಈ ಮೂಲಕ ಒಮಿಕ್ರಾನ್ ಸೋಂಕಿತರ ಸಂಖ್ಯೆ 479ಕ್ಕೇರಿದೆ. ರಾಜ್ಯದಲ್ಲಿಂದು ಒಟ್ಟು 1,50,479 ಜನರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ.
ಹೊಸದಾಗಿ 11,698 ಕೋವಿಡ್ ಕೇಸ್ಗಳು ಕಂಡುಬಂದಿವೆ. 60,48 ಸಕ್ರಿಯ ಸೋಂಕು ಪ್ರಕರಣಗಳಿವೆ. ಬೆಂಗಳೂರಿನಲ್ಲೇ 9,221 ಪ್ರಕರಣಗಳು ದಾಖಲಾಗಿವೆ. ಸೋಂಕಿನಿಂದ 1,148 ಜನ ಗುಣಮುಖರಾಗಿದ್ದಾರೆ. ಒಟ್ಟು ಪಾಸಿಟಿವಿಟಿ ದರ ಶೇ. 7.7ರಷ್ಟಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಟ್ವೀಟ್ ಮಾಡಿದ್ದಾರೆ.
