ಮಂಡ್ಯ:ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಶಾಸಕಿ, ಕಾಂಗ್ರೆಸ್ ನಾಯಕಿ ಮಲ್ಲಾಜಮ್ಮಗೆ ಕೊರೊನಾ ಸೋಂಕು ತಗುಲಿದೆ. ಸದ್ಯ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೊಪ್ಪಸಮುದ್ರ ಗ್ರಾಮದ ಮನೆಯಲ್ಲಿ ಐಸೋಲೇಷನ್ ಆಗಿದ್ದಾರೆ.ದಿನಾಂಕ 9, 10 ರಂದು ಮೇಕೆದಾಟು ಪಾದಯಾತ್ರೆಗೆ ತೆರಳಿದ್ದ ಮಲ್ಲಾಜಮ್ಮಗೆ ಜ್ವರ, ಗಂಟಲು ಕೆರತ, ನಂತರ ನಿನ್ನೆ ಕೊರೋನಾ ಟೆಸ್ಟ್ ಮಾಡಿಸಿದಾಗ ಕೊರೋನಾ ಸೋಂಕು ಧೃಡವಾಗಿದೆ.. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೊಪ್ಪಸಮುದ್ರದ ಮನೆಯಲ್ಲಿ ಕ್ವಾರೈಂಟನ್ ಆಗಿದ್ದು, ಹೆಚ್ಚಿದ ಜ್ವರ, ಕೆಮ್ಮು, ಗಂಟಲು ಕೆರತದಿಂದ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯಿದೆ..
