ಮಂಡ್ಯ : ಸಕ್ಕರೆ ನಾಡಿನಲ್ಲಿ ಮತ್ತೆ ಕೊರೋನಾ ರಣಕೇಕೆ ಹಾಕಿದ್ದು, ಒಂದೇ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ತಗುಲಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿರುವ ಆದಿಚುಂಚನಗಿರಿ ನರ್ಸಿಂಗ್ ಕಾಲೇಜಿನ 4 ವಿದ್ಯಾರ್ಥಿಗಳಿಗೆ ಕೊರೋನಾ ದೃಢಪಟ್ಟಿದೆ. ಡಿ.20ರಂದು ಕೋಲ್ಕತ್ತಾದಿಂದ ಆಗಮಿಸಿದ್ದ 67 ವಿದ್ಯಾರ್ಥಿಗಳಿಗೆ 1 ವಾರದ ಹೋಂ ಕ್ವಾರಂಟೈನ್ ಬಳಿಕ ಸಾಮೂಹಿಕ ಪರೀಕ್ಷೆಯನ್ನು ನಡೆಸಲಾಯಿತು. 67 ವಿದ್ಯಾರ್ಥಿಗಳ ಪೈಕಿ ನಾಲ್ವರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ.
ಸೋಂಕಿತ ವಿದ್ಯಾರ್ಥಿಗಳ ಸಂಪರ್ಕದಲ್ಲಿದ್ದ 137 ಜನರಿಗೂ ಪರೀಕ್ಷೆಯನ್ನು ನಡೆಸಲಾಗಿದ್ದು, ಇಂದು ಸಂಜೆ ಸಂಪರ್ಕಿತರ ರಿಪೋರ್ಟ್ ಬರುವ ಸಾಧ್ಯತೆ ಇದೆ. 4 ಸೋಂಕಿತ ವಿದ್ಯಾರ್ಥಿಗಳಲ್ಲಿ ಒಮಿಕ್ರಾನ್ ಪತ್ತೆಗೆ ಜಿನೋ ಸಿಕ್ವೆನ್ಸಿ ಟೆಸ್ಟ್ ನಡೆಸಲಾಗಿದ್ದು, ಸದ್ಯ ವಿದ್ಯಾರ್ಥಿ ಗಳಿಗೆ ಆದಿಚುಂಚನಗಿರಿ ಆಸ್ಪತ್ರೆಯ ಕೊವಿಡ್ ಕೇರ್ ಸೆಂಟರ್‌ನಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಆದಿಚುಂಚನಗಿರಿ ಆಸ್ಪತ್ರೆ ಸರ್ಜನ್ ಹಾಗೂ ಬೆಳ್ಳೂರು ಆರೋಗ್ಯ ಕೇಂದ್ರದ ಇಬ್ಬರೂ ವೈದ್ಯರಿಗೂ ಮಹಾಮಾರಿ ಕೊರೋನಾ ಸೋಂಕು ದೃಢಪಟ್ಟಿದೆ.
