ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಸಿಎಂ ಗೆ ಸೋಂಕು ತಗುಲಿದ ಹಿನ್ನೆಲೆ, ಇಂದಿನಿಂದ ಮೂರು ದಿನಗಳ ಕಾಲ ನಡೆಯಬೇಕಿದ್ದ ಸಿಟಿ ರೌಂಡ್ಸ್ ಅನ್ನು ರದ್ದುಗೊಳಿಸಲಾಗಿದೆ. ಸಿಎಂ ನೇತೃತ್ವದಲ್ಲಿ ನಡೆಯಬೇಕಿದ್ದ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಗೊಳಿಸಲಾಗಿದ್ದು, ಸದ್ಯ ಸಿಎಂ ವಿಶ್ರಾಂತಿಯಲ್ಲಿದ್ದಾರೆ. ಅಲ್ಲದೇ ಸೋಂಕು ಧೃಡ ಪಟ್ಟ ಹಿನ್ನೆಲೆ, ಟ್ವೀಟ್ ಮಾಡಿರುವ ಸಿಎಂ, ನಾನು ಆರೋಗ್ಯ ವಾಗಿದ್ದೇನೆ, ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
