ಅಮೃತಸರ: ಇಟಲಿಯ ರೋಮ್ ನಿಂದ ಪಂಜಾಬ್ ನ ಅಮೃತಸರದ ವಿಮಾನ ನಿಲ್ದಾಣಕ್ಕೆ ಬಂದಿಳಿದ 173 ಮಂದಿಗೆ ಕೋರೋನಾ ಸೋಂಕು ದೃಢಪಟ್ಟಿದೆ.
ಈ ಬಗ್ಗೆ ಅಮೃತಸರ ವಿಮಾನ ನಿಲ್ದಾಣದ ನಿರ್ದೇಶಕ ಸೇಠ್ ಮಾಹಿತಿ ನೀಡಿದ್ದು, ಶುಕ್ರವಾರ ರೋಮ್ ನಿಂದ ಅಮೃತಸರ ವಿಮಾನ ನಿಲ್ದಾಣಕ್ಕೆ ಆಗಮಿಸಿದ 290 ಮಂದಿಯಲ್ಲಿ 173 ಜನರಿಗೆ ಕೋವಿಡ್ ದೃಢಪಟ್ಟಿದೆ ಎಂದು ತಿಳಿಸಿದರು.ಸೋಂಕಿತರನ್ನು ವಿವಿಧ ಕ್ವಾರಂಟೈನ್ ಕೇಂದ್ರಗಳಿಗೆ ಸ್ಥಳಾಂತರಿಸಿಲಾಗಿದೆ.
ಪಂಜಾಬ್ ನಲ್ಲಿ ಒಂದೇ ದಿನ 2901 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 6,13,976ಕ್ಕೆ ಏರಿಕೆಯಾಗಿದೆ.
ಶೇ.10.20ರಷ್ಟಿದ್ದ ಪಾಸಿಟಿವಿಟಿ ಪ್ರಮಾಣ ಶೇ. 11.75ಕ್ಕೆ ಏರಿಕೆಯಾಗಿದೆ.