ನವದೆಹಲಿ: ಕೋರೋನಾ ವಾರಿಯರ್‌ಗಳು ಮತ್ತು 60 ವರ್ಷ ದಾಟಿದ ಕಾಯಿಲೆ ಪೀಡಿತರಿಗೆ ಬೂಸ್ಟರ್ ಡೋಸ್ (ಮುಂಜಾಗ್ರತಾ ಡೋಸ್) ಲಸಿಕೆ ನೋಂದಣಿ ಶನಿವಾರ ಸಂಜೆಯಿಂದ ಆರಂಭವಾಗಲಿದೆ. ಸ್ಥಳದಲ್ಲೇ ನೋಂದಣಿ ಕಾರ್ಯ ಜ.10ರಿಂದ ಆರಂಭವಾ ಗಲಿದೆ. ಈಗಾಗಲೇ 2 ಡೋಸ್ ಪಡೆದಿರುವುದರಿಂದ ನೇರವಾಗಿ ಲಸಿಕಾ ಕೇಂದ್ರಗಳಿಗೆ ಹೋಗಿಯೂ ಲಸಿಕೆ ಪಡೆದುಕೊಳ್ಳಬಹುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. ಜನರಿಗೆ ಜ.10ರಿಂದ ಲಸಿಕಾ ಅಭಿಯಾನ ಆರಂಭವಾಗಲಿದೆ.
