ಬೆಂಗಳೂರು: ಇಂದು ವಿದೇಶದಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ 4 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆ ಹೈರಿಸ್ಕ್ ದೇಶಗಳಿಂದ ಬರುತ್ತಿರುವ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗಿದೆ. ಲಂಡನ್ ಮತ್ತು ಕತಾರ್ ನಿಂದ ಬಂದ ನಾಲ್ವರಿಗೆ ಸೋಂಕು ಕಾಣಿಸಿಕೊಂಡಿದ್ದು,
ಲಂಡನ್ ಮೂಲದ 25 ವರ್ಷದ ಮಹಿಳೆ, ಕೀನ್ಯಾ ಮೂಲದ 56 ವರ್ಷದ ಪುರುಷ, ಅಮೇರಿಕಾ ಮೂಲದ 53 ವರ್ಷದ ವ್ಯಕ್ತಿ ಮತ್ತು 15 ವರ್ಷದ ಯುವತಿಗೆ ಸೋಂಕು ಪತ್ತೆಯಾಗಿದೆ. ಸದ್ಯ ಸೋಂಕಿತರೆಲ್ಲರೂ ಬೋರಿಂಗ್ ಆಸ್ಪತ್ರೆಯಲ್ಲಿ ಐಸೋಲೇಷನ್ಗೆ ರವಾನೆ ಮಾಡಲಾಗಿದ್ದು, ಸೋಂಕಿತರ ಜೊತೆಯಲ್ಲಿ ಬಂದವರ ವಿಳಾಸ ಮತ್ತು ಪೋನ್ ನಂಬರ್ ಪಡೆದು ಹೋಂ ಕ್ವಾರಂಟೈನ್ ಗೆ ಸೂಚನೆ ನೀಡಲಾಗಿದೆ.
