ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನೇ ದಿನೇ ಕೊರೊನಾ ಆತಂಕ ಮನೆ ಮಾಡಿದ್ದು, ಡೇಂಜರ್ ನಗರಗಳಲ್ಲಿ ಬೆಂಗಳೂರು ಸಹಾ ಒಂದಾಗಿದೆ. ಈ ಹಿನ್ನೆಲೆ ಎಲ್ಲರಲ್ಲೂ ಹೆಚ್ಚು ಆತಂಕ ಸೃಷ್ಟಿಮಾಡಿದೆ. ಅದರಂತೆ ಬೆಂಗಳೂರಿನಲ್ಲಿ ಕಳೆದ ಒಂದು ವಾರಗಳಿಂದ ಬರೋಬ್ಬರಿ 60 ಪೊಲೀಸರಿಗೆ ಕೊರೊನಾ ಸೋಂಕು ಧೃಡಪಟ್ಟಿದ್ದು, ನಿನ್ನೆ ಒಂದೇ ದಿನ 30 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಒಟ್ಟಾರೆ ನಗರದಲ್ಲಿ 90 ಪೋಲಿಸ್ ಸಿಬ್ಬಂದಿಗೆ ಸೋಂಕು ಧೃಡಪಟ್ಟಿದ್ದು, ಈ ಹಿನ್ನೆಲೆ ಸಿಲಿಕಾನ್ ಸಿಟಿ ಮಂದಿಯನ್ನು ಹೆಚ್ಚು ಆತಂಕಕ್ಕೆ ನೂಕಿದೆ.
