ಬೆಂಗಳೂರು: ರೈತರು ತಮ್ಮ ದಿನನಿತ್ಯದ ಆರ್ಥಿಕತೆಯ ಹಿತದೃಷ್ಟಿಯಿಂದ ತರಕಾರಿ, ಸೊಪ್ಪು ಬೆಳೆಯುತ್ತಿದ್ದಾರೆ. ಬಿರು ಬೇಸಿಗೆಯಿಂದ ತರಕಾರಿ, ಸೊಪ್ಪು ಬೆಳೆ ಬಾರದೆ ತರಕಾರಿ ಬೆಲೆ ಗಗನ ಮುಟ್ಟಿದೆ. ಜತೆಗೆ ಕೊತ್ತಂಬರಿ ಸೊಪ್ಪಿನ ಇಳುವರಿಯೂ ಇಲ್ಲದೆ, ಬೆಲೆ ಕೈಗೆಟುಕದಾಗಿದೆ. ಒಂದು ಕಟ್ಟು ಸೊಪ್ಪಿಗೆ (ಸುಮಾರು ಒಂದು ಕೆ.ಜಿ.) 350ರಿಂದ 375 ರೂ. ದುಬಾರಿ ಬೆಲೆ ನೀಡಿ ಖರೀದಿಸುವಂತಾಗಿದೆ. ಆಹಾರದ ರುಚಿ ಹೆಚ್ಚಿಸಲು ಮತ್ತು ಪರಿಮಳ ಸೇರಿಸಲು ಕೊತ್ತಂಬರಿ ಸೊಪ್ಪನ್ನು ಬಳಸಲಾಗುತ್ತದೆ. ಆದರೆ ಅದನ್ನು ಖರೀದಿಸಲು ಬೆಲೆ ಕೇಳಿಯೇ ಗ್ರಾಹಕರು ಹುಬ್ಬೇರುವಂತಾಗಿದೆ.
ರೈತರಿಗೆ ಕುತ್ತು:
![Demo](https://ainlivenews.com/wp-content/uploads/2023/12/spoorthi-1.jpg)
ರೈತರು ಜೀವನ ನಡೆಸಲು ಹೈನುಗಾರಿಕೆಯನ್ನೇ ನಂಬಿಕೊಂಡಿದ್ದಾರೆ. ಜತೆಗೆ ತರಕಾರಿ, ಸೊಪ್ಪುಗಳನ್ನು ಬೆಳೆಯುವ ಮೂಲಕ ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳಲು ಮುಂದಾಗಿದ್ದರು. ಆದರೆ ಹವಾಮಾನ ವೈಪರೀತ್ಯದಿಂದ ತರಕಾರಿ ಬೆಳೆಗಳು ಕುಂಠಿತವಾಗಿವೆ. ಇದರಿಂದ ರೈತರ ಆರ್ಥಿಕತೆಗೂ ಕುತ್ತು ಬಂದಿದೆ. ಜತೆಗೆ ತರಕಾರಿ, ಸೊಪ್ಪಿನ ಬೆಲೆ ಏರಿಕೆಯಿಂದ ಗ್ರಾಹಕರೂ ತತ್ತರಿಸುವಂತಾಗಿದೆ.
ಪೌಷ್ಟಿಕಾಂಶ:
ಕೊತ್ತಂಬರಿ ಸೊಪ್ಪು ಹೆಚ್ಚು ಪೌಷ್ಟಿಕಾಂಶದ ಸಾರವನ್ನು ಹೊಂದಿದೆ. ಜತೆಗೆ ವಿಶಿಷ್ಟವಾದ ತಾಜಾತನ ಪರಿಮಳ ಹೊಂದಿದೆ. ಮಾಂಸದೂಟ ತಯಾರಿಕೆಯಲ್ಲಿ ಸಲಾಡ್ಗಳು, ಪಾನೀಯಗಳಿಗೆ ಬಳಸಲಾಗುತ್ತದೆ. ಜತೆಗೆ ಆಯುರ್ವೇದ, ವೈದ್ಯಕೀಯ ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ. ವಿಟಮಿನ್ ಎ, ಕೆ ಮತ್ತು ಸಿ ಹಾಗೂ ಖನಿಜಗಳನ್ನು ಹೊಂದಿದೆ.ರೈತರು ತಮ್ಮ ದಿನನಿತ್ಯದ ಆರ್ಥಿಕತೆಯ ಹಿತದೃಷ್ಟಿಯಿಂದ ತರಕಾರಿ, ಸೊಪ್ಪು ಬೆಳೆಯುತ್ತಿದ್ದಾರೆ.
ಬಿರು ಬೇಸಿಗೆಯಿಂದ ತರಕಾರಿ, ಸೊಪ್ಪು ಬೆಳೆ ಬಾರದೆ ತರಕಾರಿ ಬೆಲೆ ಗಗನ ಮುಟ್ಟಿದೆ. ಜತೆಗೆ ಕೊತ್ತಂಬರಿ ಸೊಪ್ಪಿನ ಇಳುವರಿಯೂ ಇಲ್ಲದೆ, ಬೆಲೆ ಕೈಗೆಟುಕದಾಗಿದೆ. ಒಂದು ಕಟ್ಟು ಸೊಪ್ಪಿಗೆ (ಸುಮಾರು ಒಂದು ಕೆ.ಜಿ.) 350ರಿಂದ 375 ರೂ. ದುಬಾರಿ ಬೆಲೆ ನೀಡಿ ಖರೀದಿಸುವಂತಾಗಿದೆ. ಆಹಾರದ ರುಚಿ ಹೆಚ್ಚಿಸಲು ಮತ್ತು ಪರಿಮಳ ಸೇರಿಸಲು ಕೊತ್ತಂಬರಿ ಸೊಪ್ಪನ್ನು ಬಳಸಲಾಗುತ್ತದೆ. ಆದರೆ ಅದನ್ನು ಖರೀದಿಸಲು ಬೆಲೆ ಕೇಳಿಯೇ ಗ್ರಾಹಕರು ಹುಬ್ಬೇರುವಂತಾಗಿದೆ.
ಕೊತ್ತಂಬರಿ ಸೊಪ್ಪು ಮಾಂಸಾಹಾರಿ ಮತ್ತು ಶಾಖಾರಿಗಳಿಗೂ ಅಡುಗೆ ತಯಾರಿಕೆಗೆ ಅತ್ಯಗತ್ಯವಾಗಿ ಬೇಕಿದೆ. ಆದರೆ ಅತಿಯಾದ ಬಿಸಿಲಿಗೆ ಸೊಪ್ಪು ಸಮರ್ಪಕವಾಗಿ ಬರಲಿಲ್ಲ. ಇದೀಗ ಮಳೆ ಹೆಚ್ಚಾಗಿ ಸೊಪ್ಪು ಕೊಳೆಯುತ್ತಿದೆ. ಇದರಿಂದ ಕೊತ್ತಂಬರಿ ಸೊಪ್ಪಿನ ಇಳುವರಿ ಕುಂಠಿತವಾಗಿದ್ದು, ಒಂದು ಕಟ್ಟು ಸೊಪ್ಪಿಗೆ ದಿಢೀರನೆ 350ರಿಂದ 375 ರೂ.ಗಳವರೆಗೆ ಏರಿಕೆಯಾಗಿದೆ. ಒಂದು ಕಾಲದಲ್ಲಿ5 ರೂ.ಗೆ ಒಂದು ಹಿಡಿ ಕೊತ್ತಂಬರಿ ಸೊಪ್ಪು ಕೊಡುತ್ತಿದ್ದೆವು. ಆದರೆ ಇದೀಗ ಕನಿಷ್ಠ 20 ರೂ.ಗೆ ಸೊಪ್ಪು ಕೊಡದಂತಾಗಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)