ಚಾಮರಾಜನಗರ:– ಮಾದಪ್ಪನ ಬೆಟ್ಟಕ್ಕೆ ತಿರುಪತಿ ಮಾದರಿ ಮೆಟ್ಟಿಲು ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಪವಾಡ ಪುರುಷ ಮಲೇಮಹದೇಶ್ವರಬೆಟ್ಟಕ್ಕೆ ಭರದಿಂದ ಮೆಟ್ಟಿಲು ಕಾಮಗಾರಿ ನಡೆಯುತ್ತಿದೆ. ತಾಳಬೆಟ್ಟದಿಂದ ಮಾದಪ್ಪನ ಬೆಟ್ಟಕ್ಕೆ ನಿರ್ಮಾಣಗೊಳ್ಳುತ್ತಿರುವ ಮಾದರಿ ಮೆಟ್ಟಿಲು , ಈ ಮೆಟ್ಟಿಲು ಕಾಮಗಾರಿಯನ್ನು ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಪರಿಶೀಲನೆ ನಡೆಸಿದ್ದಾರೆ. ಬೆಟ್ಟದ ಪಾದಚಾರಿ ಮಾರ್ಗದ ಮೆಟ್ಟಿಲುಗಳ ಕಾಮಗಾರಿಯನ್ನು ವೀಕ್ಷಣೆ ಮಾಡಿದ್ದಾರೆ.