ಇಂದು ಸರ್ವಜ್ಞನಗರ ಕ್ಷೇತ್ರದಲ್ಲಿ ಎಲ್ಲಾ ಅಭಿವೃದ್ಧಿ ಯೋಜನೆಗಳ ಕುರಿತು ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಶಾಸಕ ಕೆ.ಜೆ ಜಾರ್ಜ್ ಅಧ್ಯಕ್ಷತೆ ವಹಿಸಿದ್ದರು. ಇನ್ನು ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾಹಿತಿ ತಿಳಿದುಕೊಂಡರು. ರಸ್ತೆ ಡಾಂಬರೀಕರಣ, ರಸ್ತೆ ಸುರಕ್ಷತೆ, ಬೀದಿ ದೀಪ ಅಳವಡಿಕೆ, ಮನೆಗಳ ವ್ಯವಸ್ಥೆ ಸಾರ್ವಜನಿಕರ ಮೂಲ ಸೌಕರ್ಯಗಳ ಅಭಿವೃದ್ದಿ ಯೋಜನಾ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಲಾಯಿತು, ಇನ್ನಿತರ ಯಾವುದೇ ಸಾರ್ವಜನಿಕರ ಅವಶ್ಯಕತೆಗೆ ಇರುವ ಅಭವೃದ್ದಿ ಕಾರ್ಯಗಳು ಶೀಘ್ರವಾಗಿ ಕಾರ್ಯರೂಪಕ್ಕೆ ಬರುವ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು.
