ಹಾವೇರಿ: ರಾಜ್ಯದಲ್ಲಿ ಕಾಂಗ್ರೆಸ್ ಕನಿಷ್ಠ 18 ರಿಂದ 20 ಸೀಟ್ ಗೆಲ್ಲುತ್ತೇವೆ. ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಮುಂದುವರೆಯುತ್ತಾರೆ. ಡಿಸಿಎಂ ಆಗಿ ಡಿಕೆಶಿಯವರು ಮುಂದುವರೆಯುತ್ತಾರೆ. ಅವರವರ ಎರಡು ಖುರ್ಚಿಗಳು ಫುಲ್ಲಾಗಿದೆ ಎಂದರು.
ಈಶ್ವರಪ್ಪ ನವರು ಎಲ್ಲಾ ತಯಾರಿ ಮಾಡಿದ್ದರು, ಬೊಮ್ಮಾಯಿಯವರು ಅವರಿಗೆ ಹೇಳದೆ ಬಂದರು. ಈಶ್ವರಪ್ಪ ನವರ ಗತಿ ಏನಾಯ್ತು.ಬೊಮ್ಮಾಯಿ ಒಬ್ಬ ಮುಖ್ಯಮಂತ್ರಿ ಆದಮೇಲೆ ಮತ್ತೊಂದು ಆಸೆ ಮಾಡಬೇಕಾ. ಜೀವನದ ಅಂತಿಮ ಗುರಿ ತಲುಪಿದ ಮೇಲೆ ಅವರಲ್ಲಿ ದೊಡ್ಡತನಬೇಕು ಸಣ್ಣವರು ಮೇಲೆ ಬರಲಿ ಅಂತಾ. ಬೊಮ್ಮಾಯಿ ಬಂದ ಮೇಲೆ ಬಿಜೆಪಿ ಒಡೆದು ಹೋಗಿದೆ. ಯಾರ ಎದೆಯಲ್ಲಿ ರಾಮ ಮೋದಿ ಇದ್ರು, ಅವರ ಎದೆಯಲ್ಲಿ ಏನೇನು ಬರುತ್ತಿದೆ ಇವತ್ತು ಗೊತ್ತಾಗಲಿದೆ ಅವರ ಎದೆಯಲ್ಲಿ ಏನಿದೆ ಎಂದು ಹೇಳಿದರು.