ಕಾರವಾರ:- ನಾನು ಇರೋವರೆಗೆ ಕಾಂಗ್ರೆಸ್ ಅವ್ರಿಗೆ ನೆಮ್ಮದಿ ಕೊಡಲ್ಲ ಎಂದು ಅನಂತಕುಮಾರ್ ಹೆಗಡೆ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ನಾನು ಇರೋತನಕ ಕಾಂಗ್ರೆಸ್ಗೆ ನೆಮ್ಮದಿ ಕೊಡೋದಿಲ್ಲ, ಕಾಂಗ್ರೆಸ್ ನಾಯಕರು ಯಾರನ್ನ ಕೇಳಿದ್ರೂ ಕರಿಮಣಿ ಮಾಲಿಕ ನಾನಲ್ಲ ಅಂತಿದ್ದಾರೆ, ರಾಹುಲ್ ಗಾಂಧಿ ಆಲೂಗಡ್ಡೆಯಿಂದ ಬಂಗಾರ ತೆಗಿತಿದ್ದಾನೆ ಎಂದರು.
ಕಾಂಗ್ರೆಸ್ ನಾಯಕರು ಯಾರನ್ನ ಕೇಳಿದ್ರೂ ಕರಿಮಣಿ ಮಾಲಿಕ ನಾನಲ್ಲ ಅಂತಿದ್ದಾರೆ ಎಂದು ಕುಟುಕಿದ್ದಾರೆ. ದೇಶವನ್ನ ಲೂಟಿ ಮಾಡಿದ್ದು ಕಾಂಗ್ರೆಸ್, ಮಹಿಳಾ ವಿರೋಧಿ ಕಾಂಗ್ರೆಸ್, ಈ ದೇಶದಲ್ಲಿ ಕಾಂಗ್ರೆಸ್ ಮಾಡಿರುವ ಅವಾಂತರಗಳನ್ನ ನೋಡಿದ್ರೆ ಯಾರಿಗೂ ನಿದ್ದೆ ಬರಲ್ಲ. ವೈಯಕ್ತಿಕ ಬದುಕಿರಲಿ, ರಾಜಕೀಯವಿರಲಿ ನೀತಿ, ನಿಯತ್ತು ಇರಲೇಬೇಕು. ಇಲ್ಲವಾದಲ್ಲಿ ವ್ಯಕ್ತಿತ್ವ ಬೆಳೆಯೋದಕ್ಕೆ ಸಾಧ್ಯವೇ ಇಲ್ಲ. ದೇಶದ ನೀತಿ, ನೀಯತ್ತನ್ನ ಕುಲಗೆಡಿಸಿದ್ದೇ ಕಾಂಗ್ರೆಸ್, ಅವರಿಗೆ ನೀತಿ ಇಲ್ಲ, ನೀಯತ್ತಂತೂ ಮೊದಲೇ ಇಲ್ಲ. ಕ್ರಾಂತಿ ಆದ್ರೇನೆ ಶಾಂತಿ ಸಿಗೋದು ಮತ್ತೆ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಜಿ20 ಕಾರ್ಯಕ್ರಮದ ಬಳಿಕ ಇಡೀ ಜಗತ್ತೇ ಭಾರತವನ್ನ ಹೊಗಳಿತು, ಆದ್ರೆ ರಾಹುಲ್ ಗಾಂಧಿ ಎಲ್ಲಿದ್ರು ಯಾರಿಗೂ ಗೊತ್ತಿಲ್ಲ. ರಾಹುಲ್ ಗಾಂಧಿ ಆಲೂಗಡ್ಡೆಯಿಂದ ಬಂಗಾರ ತೆಗಿತಿದ್ದಾನೆ. ಪ್ರಬಲ ವಿರೋಧ ಪಕ್ಷವಾಗಿಯೂ ಕಾಂಗ್ರೆಸ್ ಇಲ್ಲ, ನೈತಿಕವಾಗಿ ಕಾಂಗ್ರೆಸ್ಗೆ ನೆಲೆಯೇ ಇಲ್ಲ, ಸಂಘಟನಾತ್ಮಕವಾಗಿಯೂ ಇಲ್ಲ. ಪ್ರಧಾನಿ ಮೋದಿ ಸರ್ಕಾರ ಬರುವ ಮುನ್ನ ಕಾಂಗ್ರೆಸ್ ಅಧಿಕಾರ ಮಾಡಿತ್ತು. ಕುರುಡರಿಗೆ ಯಾವತ್ತೂ ಹೆಚ್ಚಿಗೆ ತಿಳಿಸಬೇಕಾದ ಅವಶ್ಯಕತೆ ಇರೋದಿಲ್ಲ, ಆದ್ರೆ ಪೂರ್ವಾಗ್ರಹ ಪೀಡಿತ ಕುರುಡರಿಗೆ ಹೇಳಿದ್ರೂ ಒಪ್ಪೋದಿಲ್ಲ, ಸತ್ಯ ಎದ್ದು ಕೂರುವಾಗ, ಒಳಗೆ ಸುಳ್ಳು ಇಡೀ ಜಗತ್ತನ್ನ ಓಡಾಡಿಕೊಂಡು ಬಂದ್ದಿತ್ತಂತೆ, ಹಾಗೇ ಕಾಂಗ್ರೆಸ್ ಅವರದ್ದು ಎಂದು ವಾಗ್ದಾಳಿ ನಡೆಸಿದ್ದಾರೆ.