ಮಂಗಳೂರು:- ಕರ್ನಾಟಕದಲ್ಲಿ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಚುನಾವಣೆ ಪ್ರಕ್ರಿಯೆ ಮತ್ತು ರಾಜಕಾರಣದಲ್ಲಿ ವಿರೋಧಪಕ್ಷಗಳು ಗೆಲ್ಲಲ್ಲ, ಆದ್ರೆ ಆಳುವ ಪಕ್ಷಗಳು ಸೋಲುತ್ತೆ. ಕಾಂಗ್ರೆಸ್ ಈಗ ಅಧಿಕಾರದಲ್ಲಿದೆ, ಮುಂದೆ ಸೋಲೋದು ಅವರೇ ಎಂದರು.
ನಾವು ಮೊದಲು ಯೋಚನೆ ಮಾಡಬೇಕು. ಚುನಾವಣೆ ಪ್ರಕ್ರಿಯೆ ಮತ್ತು ರಾಜಕಾರಣದಲ್ಲಿ ವಿರೋಧಪಕ್ಷಗಳು ಗೆಲ್ಲಲ್ಲ, ಆದ್ರೆ ಆಳುವ ಪಕ್ಷಗಳು ಸೋಲುತ್ತೆ. ಕಾಂಗ್ರೆಸ್ ಈಗ ಅಧಿಕಾರದಲ್ಲಿದೆ, ಮುಂದೆ ಸೋಲೋದು ಅವರೇ. ಲಾಸ್ ಆಗಿದೆ, ಹಣ ಹೊಂದಿಸಲುಆಗುತ್ತಿಲ್ಲ ಅನ್ನೋದಕ್ಕೆ ಏನ್ ಬಿಸಿನೆಸ್ ಮಾಡ್ತಿದ್ದೀರಾ? ಇದೆಲ್ಲವನ್ನ ಜನ ಗಮನಿಸಬೇಕು, ನಾವು ಎಲ್ಲಿ ತಪ್ಪುತ್ತಿದ್ದೇವೆ ಅನ್ನೋದನ್ನ ಯೋಚಿಸಬೇಕು ಎಂದು ಸಲಹೆ ನೀಡಿದರು.
ಒಂದು ಸರ್ಕಾರ ಒಂದು ದೇಶ ನಡೆಯೋದು ಪ್ರಜೆಗಳ ದುಡ್ಡಿಂದ. ಒಂದು ದೇವಸ್ಥಾನ ನಡೆಯೋದು ಪ್ರಜೆಗಳು ಹಾಕಿದ ಹುಂಡಿಯ ಹಣದಿಂದ. ಸರ್ಕಾರದಲ್ಲಿ ಯಾಕೆ ಸಾಲ ಆಗ್ತಿದೆ? ಸಾಲ ಮಾಡಿದ ಹಣ ಏನಾಗ್ತಿದೆ ಇದೆಲ್ಲವನ್ನ ನಾವು ಗಮನಿಸಬೇಕು, ಪ್ರಶ್ನಿಸಬೇಕು ಎಂದು ಹೇಳಿದರು.
ಇನ್ನೂ ಉಚಿತ ಭರವಸೆಗಳ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಸುಪ್ರೀಂ ಕೋರ್ಟ್ ಉಚಿತ ಭರವಸೆಗಳು ಪರಾವಲಂಬಿ ವರ್ಗವನ್ನಾಗಿ ಮಾಡುತ್ತೆ ಅಂದಿದೆ. ಬಡವರಿಗೆ ಕೊಡುವ ಫ್ರೀಬಿಸ್ ಹೇಗೆ ಪರಾವಲಂಬಿ ಆಗುತ್ತೆ? ಹಾಗಾದರೆ ಕಾರ್ಪೊರೇಟ್ ಕಂಪನಿಗಳ ಸಾಲ ಮನ್ನಾ ಮಾಡೋದು ಪರಾವಲಂಬಿ ಅಲ್ವಾ? ಎಂದು ಪ್ರಶ್ನಿಸಿದರು.