ಬೆಂಗಳೂರು: ನಿಯಮ ಮೀರಿ ಪಾದಯಾತ್ರೆಯಲ್ಲಿ ಪಾಲ್ಗೊಂಡ 30 ಕಾಂಗ್ರೆಸ್ ನಾಯಕರ ಮೇಲೆ FIR ದಾಖಲಾಗಿದೆ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆಯ ಕಾರಣಕರ್ತರ ವಿರುದ್ಧ ಮೊದಲು, ನಂತರ ಉಳಿದವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಇನ್ನೂ ದಂಡ ಹಾಕುವ ಪ್ರಕ್ರಿಯೆಯಲ್ಲಿ ಸರ್ಕಾರದ ವಿಳಂಬ ಮಾಡುವುದಿಲ್ಲ.
ಇವತ್ತು ಅವರು ಮಾಡಬೇಕಾದ್ದು ಪಾದಯಾತ್ರೆ ಅಲ್ಲ. ನೀರಿನಲ್ಲಿ ಕಿವಿ ಹಿಡಿದು ಕೂತು, ಜನರಲ್ಲಿ ದಮ್ಮಯ್ಯ ತಪ್ಪಾಯ್ತೆಂದು ಕ್ಷಮೆ ಕೇಳಬೇಕು ಎಂದು ಹೇಳಿದರು. ಕೋವಿಡ್ ಸಂದರ್ಭದಲ್ಲಿ ಪಾದಯಾತ್ರೆ ಮಾಡಬಾರದಿತ್ತು. ನಾವು ಅಸಹಾಯಕರಲ್ಲ, ನಿರ್ಲಕ್ಷ್ಯ ಕೂಡ ಮಾಡಿಲ್ಲ. ಪೊಲೀಸ್ ಪಡೆಯಿದೆ, ತಡೆಯಲು ಆಗುವುದೇ ಇಲ್ಲ ಎಂದಲ್ಲ, ಆದರೆ ಅದು ಮತ್ತೊಂದು ಘಟನೆಗೆ ಕಾರಣ ಆಗಬಾರದು ಎಂದು ಗೃಹ ಸಚಿವರು ಎಚ್ಚರಿಕೆ ನೀಡಿದರು.
