ಕಾಂಗ್ರೆಸ್ ಸೇವಾದಳದ ಪದಾಧಿಕಾರಿಗಳ ಪಟ್ಟಿಯನ್ನು ರಾಜ್ಯ ಮುಖ್ಯಸಂಘಟಕರಾದ ಎಂ.ರಾಮಚಂದ್ರ ಇಂದು ಬಿಡುಗಡೆ ಮಾಡಿದ್ದಾರೆ. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸೇವಾದಳ ಸಮಿತಿ ಹಾಗೂ ಕರ್ನಾಟಕ ಸೇವಾದಳ ಉಸ್ತುವಾರಿ ಹೊತ್ತಿರುವ ಬಲರಾಂ ಬಂಡೋರಿ ಅವರ ಜತೆ ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಿ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಿದ್ದರು.
ರಾಜ್ಯ ಸೇವಾದಳದ ಕಾರ್ಯ ಮುಖ್ಯ ಸಂಘಟಕರಾಗಿ ವಿ.ವಿ. ತುಳಸಿಗಿರಿ, ಕಾರ್ಯ ಮಹಿಳಾ ಮುಖ್ಯ ಸಂಘಟಕರಾಗಿ ಸುಜಾತ ಎಸ್. ಉಳ್ಳಾಲ್, ಯುವ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾಗಿ ಜುನೈದ್ ಪಿ.ಕೆ, ಖಜಾಂಚಿಯಾಗಿ ಟಿ.ಆರ್.ಶಿವಕುಮಾರ್, ರಾಜ್ಯ ಉಪಾಧ್ಯಕ್ಷರುಗಳಾಗಿ ವಿನಾಯಕ ಮೂರ್ತಿ, ಹನುಮಂತರಾವ್ ಜವಳಿ, ಗೋಪಾಲ ಗೌಡ, ಗಿರಿಜ ಹುಗಾರ್, ಬಿ.ಎನ್. ಸಿಂಧೆ ಅವರನ್ನು ನೂತನವಾಗಿ ನೇಮಿಸಲಾಗಿದೆ ಎಂದು ಹೇಳಲಾಗಿದೆ.
