ನವದೆಹಲಿ: ಅದಾನಿ ಲಂಚ ಪ್ರಕರಣಕ್ಕೆ ಸಂಬಂಧ ಸಂಸತ್ತಿನ ಆವರಣದಲ್ಲಿ ಕಾಂಗ್ರೆಸ್ ವಿಭಿನ್ನ ಪ್ರತಿಭಟನೆ ನಡೆಸುತ್ತಿದೆ. ಸಂಸತ್ತಿನ ಆವರಣದಲ್ಲಿ ಬಿಜೆಪಿ ಸಂಸದರಿಗೆ ಗುಲಾಬಿ ಮತ್ತು ತ್ರಿವರ್ಣ ಧ್ವಜವನ್ನು ನೀಡುವುದರ ಮೂಲಕ ವಿಭಿನ್ನ ಪ್ರತಿಭಟನೆ ನಡೆಸುತ್ತಿದೆ. ಜಾಕೆಟ್, ಮುಖವಾಡ ಮತ್ತು ಕಪ್ಪು ಬ್ಯಾಗ್ಗಳ ಪ್ರದರ್ಶನದ ನಂತರ ಗುಲಾಬಿ ನೀಡುವ ಮೂಲಕ ತನ್ನ ಆಕ್ರೋಶ ವ್ಯಕ್ತಪಡಿಸಿದೆ.
ದೇಶದ ಯಾವುದೇ ಸಂಘಟನೆಯನ್ನು ಹೊಗಳುವುದು ಕಾನೂನು ಬಾಹಿರ ಆಗುವುದಿಲ್ಲ: ಕಿರಣ್ ರಿಜಿಜು
ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಲೋಕಸಭೆ ಆವರಣದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಗುಲಾಬಿ ಮತ್ತು ತ್ರಿವರ್ಣ ಧ್ವಜವನ್ನು ನೀಡಿದರು. ಸಂಸತ್ ಭವನದ ಪ್ರವೇಶ ದ್ವಾರದಲ್ಲಿ ಇಂಡಿಯಾ ಬ್ಲಾಕ್ ನಾಯಕರು ಗುಲಾಬಿಗಳು ಮತ್ತು ತ್ರಿವರ್ಣ ಧ್ವಜವನ್ನು ಹಿಡಿದುಕೊಂಡಿರುವುದು ಕಂಡುಬಂದಿತು.
ಅಮೆರಿಕದಲ್ಲಿ ಅದಾನಿ ವಿರುದ್ಧದ ಲಂಚದ ಆರೋಪದ ಕುರಿತು ಚರ್ಚೆಗಳನ್ನು ಕೇಂದ್ರ ಸರ್ಕಾರ ತಪ್ಪಿಸುತ್ತಿದೆ ಎಂದು ಆರೋಪಿಸಿ ಸಂಸತ್ತಿನ ಹೊರಗೆ ಪ್ರತಿಪಕ್ಷಗಳು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿವೆ. ಚಳಿಗಾಲದ ಅಧಿವೇಶನ ಪ್ರಾರಂಭವಾದಾಗಿನಿಂದ, ಉಭಯ ಸದನಗಳು ವಿವಿಧ ವಿಷಯಗಳ ಮೇಲೆ ನಿರಂತರ ಪ್ರತಿಭಟನೆ ನಡೆಸುತ್ತಿವೆ.